ಕನಕ ಭವನ ನಿರ್ಮಾಣಕ್ಕೆ ಸಚಿವರಿಂದ 10 ಲಕ್ಷ ದೇಣಿಗೆ : ಕಾಳಿದಾಸನ ಪ್ರಚಾರಕ್ಕೆ ಮನವಿ

ಶಹಪುರ : ರಾಜ್ಯದ ಪ್ರತಿ ಜಿಲ್ಲೆಗೊಂದು ಕನಕ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಸ್ವಂತ ದೇಣಿಗೆ ನೀಡುವುದಾಗಿ ತಿಳಿಸಿದ ಸಚಿವರಾದ ಎಂಟಿವಿ ನಾಗರಾಜ ರವರ ಕಾರ್ಯ ಸ್ವಾಗತಾರ್ಹವಾದದ್ದು ಎಂದು ರಾಜ್ಯ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಕರೇಗಾರ ಸ್ವಾಗತಿಸಿದ್ದಾರೆ.

ಸಚಿವರು ತಮ್ಮ ಸ್ವಂತ ಖರ್ಚಿನಲ್ಲಿ ಕನಕ ಭವನ ನಿರ್ಮಿಸಲು 10 ಲಕ್ಷ ನೀಡುತ್ತಿದ್ದಾರೆ. ಕುರುಬ ಸಮಾಜದ ಪ್ರತಿಯೊಬ್ಬರು ಇದರ ಬಗ್ಗೆ ಗಮನ ಹರಿಸಬೇಕಿದೆ.ಸಚಿವರ ಸಲಹೆಯಂತೆ ಕನಕ ಭವನ ನಿರ್ಮಿಸಲು ಬೇಕಾದ ಸೌಲಭ್ಯವನ್ನು ಸಚಿವರಿಗೆ ಒದಗಿಸಿಕೊಡಬೇಕು. ಪ್ರತಿ ಜಿಲ್ಲೆಯ ಜಿಲ್ಲಾ ಸಮಾಜದ ಅಧ್ಯಕ್ಷರನ್ನೋಳಗೊಂಡು ಎಲ್ಲರೂ ಪಕ್ಷಭೇದ ಮರೆತು ಸಹಕರಿಸಬೇಕಿದೆ ಎಂದು ಹೇಳಿದರು.

ಕಾಳಿದಾಸರ ಪ್ರಚಾರಕ್ಕೆ ಮಹತ್ವ ಕೊಡಬೇಕಿದೆ

ಕುರುಬ ಸಮಾಜದ ಕವಿರತ್ನ ಎಂದೇ ಪ್ರಖ್ಯಾತಿ ಪಡೆದ ಅದ್ಭುತ ಕೃತಿಗಳನ್ನು ಬರೆದು ಕವಿರತ್ನ ಕಾಳಿದಾಸ ಎಂದು ಬಿರುದಾಂಕಿತನಾದ ಕಾಳಿದಾಸರ ಪ್ರಚಾರಕ್ಕೆ ಸರಕಾರ ಮತ್ತು ಸಮಾಜದ ರಾಜಕೀಯ ಮುಖಂಡರು ಪ್ರಚಾರ ಒದಗಿಸಿ ಕೊಡಬೇಕಿದೆ.ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಮಹಾವಿದ್ವತ್ ಹೊಂದಿದ ಕಾಳಿದಾಸನು ಕಾವ್ಯ ನಾಟಕಗಳನ್ನು ರಚನೆ ಮಾಡಿದ್ದಾರೆ. ಕವಿಕುಲಗುರು ಎಂಬ ಪ್ರಖ್ಯಾತಿ ಪಡೆದ ಕಾಳಿದಾಸನು ರಘುವಂಶ, ಕುಮಾರಸಂಭವ, ಮೇಘದೂತ, ಋತುಸಂಹಾರ, ಅಭಿಜ್ಞಾನ ಶಾಕುಂತಲಾ,ಮಾಲವಿಕಾಗ್ನಿಮಿತ್ರ, ವಿಕ್ರಮೋರ್ಪಿಶೀಯ ಹೀಗೆ  ಕಾಳಿದಾಸನ ಸಾಹಿತ್ಯ ಜಗತ್ತಿಗೆ ಪ್ರಸಿದ್ಧವಾದದ್ದು. ಕಾಳಿಯ ಕೃಪೆಗೆ ಪಾತ್ರರಾದ ಕಾಳಿದಾಸನು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವೆಲ್ಲ ಕೃತಿಗಳಿಗೆ ಪ್ರಚಾರ ಕೊಡಬೇಕಿದೆ. ಸರಕಾರ ಮತ್ತು ಸಮಾಜದ ಮುಖಂಡರು ಗಮನ ಹರಿಸಬೇಕೆಂದು ಈ ಸಮಯದಲ್ಲಿ ಮನವಿ ಮಾಡಿದರು.

 

About The Author