ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಆದೇಶ ಪತ್ರ ವಿತರಣೆ

ಬೆಂಗಳೂರು: ಸಮಾಜದ ಒಳಿತಿಗಾಗಿ ಏಳ್ಗೆಗಾಗಿ ಸದೃಢವಾಗಿ ದುಡಿಯಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೇಳಿದರು.ಬೆಂಗಳೂರಿನಲ್ಲಿನ ತಮ್ಮ ನಿವಾಸದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ ಮಾತನಾಡುತ್ತಾ, ಬಾಲ್ಯದಿಂದ ಕಾಲೇಜು ದಿನಗಳವರೆಗೆ ಸಮಾಜದ ಹಲವಾರು ಸಂಘಟನೆಗಳ ಜೊತೆ ಸಮಾಜದ ಮುಂದಾಳತ್ವದಲ್ಲಿ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ ಎಮ್ ಪಾಟೀಲರವರು ರಾಜ್ಯದ ಹಲವು ಜಿಲ್ಲೆಗಳ ಪದಾಧಿಕಾರಿಗಳಿಗೆ ಸಿದ್ದರಾಮಯ್ಯನವರ ಮೂಲಕ ಪದಾಧಿಕಾರಿಗಳಿಗೆ ಆದೇಶ ಪಾತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಂಜುಳಾ ನಾರಾಯಣ ಮಹಿಳಾ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷರಾಗಿ ನೇಮಕ ಹಿನ್ನೆಲೆಯಲ್ಲಿ ಅವರ ಹುಟ್ಟು ಹಬ್ಬದ ದಿನದಂದು ಮಾಜಿ ಮುಖ್ಯಮಂತ್ರಿಗಳ ಜೊತೆ ಆದೇಶ ಪ್ರತಿ ಕೊಡಿಸಿರುವುದು ಖುಷಿ ತಂದಿದೆ ಎಂದು ಬಿಎಮ್ ಪಾಟೀಲರಿಗೆ ಧನ್ಯವಾದ ತಿಳಿಸಿದರು.
ಉಮೇಶ್ -ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕರು ಸೇರಿದಂತೆ ಇತರರಿಗೆ ಜವಾಬ್ದಾರಿ ವಹಿಸಕೊಡಲಾಯಿತು.

Leave a Reply

Your email address will not be published. Required fields are marked *