ಮಹಾಶೈವ ಧರ್ಮಪೀಠದ ಶ್ರೀ ಮಹಾಕಾಳಿ ಮಂದಿರದಲ್ಲಿ 108 ದೀಪೋತ್ಸವ ಕಾರ್ಯಕ್ರಮ

ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಸುಕ್ಷೇತ್ರ ಕೈಲಾಸದಲ್ಲಿ ಇಂದು ಶ್ರೀ ಮಹಾಕಾಳಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಪ್ರಥಮ ಬಾರಿಗೆ ಇಂದು ರಾತ್ರಿ 7-00 ಗಂಟೆಗೆ ಗ್ರಾಮದ ಹುಲಿಗೆಪ್ಪ ಮತ್ತು ಶಾಂಭವಿ ದಂಪತಿಗಳಿಂದ ಶ್ರೀ ಮಹಾಕಾಳಿ ಮಂದಿರದಲ್ಲಿ 108 ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಿಂದ ಹೋಮ ಹವನ ಮೂಲಕ  ಪ್ರತಿಷ್ಠಾಪಿಸಲು ಬೆಳಗ್ಗೆ 9:00ಗೆ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ರವರು  ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಪೀಠಾಧ್ಯಕ್ಷರು ಹುಲಿಗೆಪ್ಪ ಮತ್ತು ಶಾಂಭವಿ ದಂಪತಿಗಳಿಗೆ  ಸನ್ಮಾನಿಸಿ ಗೌರವಿಸಿದರು.ಶ್ರೀ ಮಹಾಕಾಳಿಯ ದೇವಸ್ಥಾನವು  ಹೂವುಗಳಿಂದ ಅಲಂಕಾರಗೊಂಡಿದ್ದು, ದೀಪಾಲಂಕಾರ ವಿದ್ಯುತ್ ಬಲ್ಪ್ ಗಳಿಂದ ಜಗಮಗಿಸುತ್ತಿದೆ.

Leave a Reply

Your email address will not be published. Required fields are marked *