ಉಕ್ಕಿನಾಳ ಕರವಸೂಲಿಗಾರ ಶಿವರುದ್ರಪ್ಪ ಸೇವೆಯಿಂದ ವಜಾ|

ಶಹಾಪುರ:ಕಳೆದ ಹತ್ತಾರು ವರ್ಷಗಳಿಂದ ಉಕ್ಕಿನಾಳ ಗ್ರಾಪಂ.ಯಲ್ಲಿ ಕರವಸೂಲಿಗಾರನಾಗಿ ಮತ್ತು ಹಾರಣಗೇರಾ ಗ್ರಾಮದ ಪಂಪ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಿವರುದ್ದಪ್ಪ ಬಸವರಾಜ ಎನ್ನುವವರನ್ನು ಗ್ರಾಪಂ. ಆಡಳಿತ ಸೇವೆಯಿಂದ ವಜಾಗೊಳಿಸಿ ಆದೇಶ ನೀಡಿದೆ. ಇತ್ತಿಚೆಗೆ ಶಿವರುದ್ದಪ್ಪ ಗ್ರಾ,ಪಂ, ಯಲ್ಲಿ ಆಶ್ರೆಯ ಮನೆಯಲ್ಲಿ ತನ್ನ ರಕ್ತ ಸಂಭAಧಿಕರಿಗೆ ಮನೆಗಳನ್ನು ಮಂಜೂರಿ ಮಾಡಿ ಅನುಧಾನ ದುರ್ಭಳಿಕೆ ಮಾಡಿಕೊಂಡಿದ್ದನು. ಅಲ್ಲದೆ ಜಾತಿ ನಿಂದನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಶಿವರುದ್ದಪ್ಪ ಗೋಗಿ ಪೋಲಿಸ್ ಠಾಣೆಯಲ್ಲಿ ಕೇಸ್ ವೊಂದರಲ್ಲಿ ಹೆಸರು ನಮೋದಿಸಲಾಗಿತ್ತು.

ಆಶ್ರೆಯ ಭ್ರಷ್ಟಾಚಾರ ಕುರಿತು ಲೋಕಾಯುಕ್ತರ ತನಿಖೆಗೂ ಕ್ಯಾರೆ ಅನ್ನದ ಗ್ರಾ.ಪಂ. ಆಡಳಿತ ವಿರುದ್ದ ಪ್ರಾದೇಶಿಕ ಆಯುಕ್ತರಿಗೂ ದೂರು ಸಲ್ಲಿಸಲಾಗಿತ್ತು ಎಂದು ತಿಳಿದು ಬಂದಿದ್ದು,ಇತ್ತಿಚೆಗೆ ಸ್ಥಳಿಯ ಗ್ರಾ,ಪಂ, ಸದಸ್ಯರು ಗ್ರಾಮದಲ್ಲಿ ನೀರಿನ ಟ್ಯಾಂಕ್ ತುಂಬಿ ಹರಿಯುತ್ತಿದೆ ಬಂದ್ ಮಾಡಿ ಎಂದು ಹೇಳಿದ್ದಕ್ಕೆ ಗ್ರಾ,ಪಂ, ಸದಸ್ಯನ ಮೇಲೆ ಹಲ್ಯೆ ಮಾಡಿದ್ದ ಶಿವರುದ್ರಪ್ಪ ವಿರುದ್ದ ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎಲ್ಲಾ ಕಾರಣಗಳನ್ನು ಪರಿಗಣಿಸಿಕೊಂಡು ತಾಲುಕಾ ಪಂಚಾಯತ ಅಧಿಕಾರಿಗಳ ಸೂಕ್ತ ನಿರ್ಧೇಶನದಂತೆ ಗ್ರಾ,ಪಂ, ಆಡಳಿತ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಯಿತು.

Leave a Reply

Your email address will not be published. Required fields are marked *