ಶ್ರೀ ಚರಬಸವತಾತನವರ ೧೦೦ನೇ ಜಾತ್ರಾ ಮಹೋತ್ಸವ

ಶಹಾಪುರ:ಸಗರನಾಡಿನ ಆರಾಧ್ಯ ದೈವಿ ಪುರಷ ನಗರದ ಗದ್ದುಗೆಯ ಶ್ರೀಚರಬಸವತಾತನವರು ಲಿಂಗೈಕ್ಯರಾಗಿ ಶತಮಾನ ಸಂದಿದೆ. ಪ್ರತಿ ವರ್ಷದಂತೆ ಅದ್ಧೂರಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿವೆ. ಗದ್ದುಗೆಯು ಮದುಮಗನಂತೆ ಶ್ರೀಗಂರಿಸಿಕೊAಡಿದ್ದು ಜಾತ್ರಾ ನಿಮಿತ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರಿಗುತ್ತಿವೆ. ಈಗಾಗಲೇ ನಾಡಿನ ಪ್ರಸಿದ್ಧ ಪ್ರವಚನಕಾರ ಬೆಂಗಳೂರಿನ ಅನ್ನದಾನ ಸ್ವಾಮಿಗಳಿಂದ ಚರಬಸವತಾತನವರ ಜೀವನ ವೃತ್ತಾಂತ ಕುರಿತು ಪ್ರವಚನ ದಿನಂಪ್ರತಿ ನಡೆದು ಬರುತ್ತಿದ್ದು ನೂರಾರು ಭಕ್ತರು ಸಂಜೆ ೭ಗಂಟೆಗೆ ಗದ್ದುಗೆಯಲ್ಲಿ ಪ್ರವಚನ ಆಲಿಸುತ್ತಿದ್ದಾರೆ.

ಪ್ರತಿಬಾರಿ ಜಾತ್ರೆಗಿಂತಲೂ ಈ ಬಾರಿಯ ಜಾತ್ರೆ ವಿಶೇಷವಾಗಿದ್ದು ೧೦೦ನೇ ವರ್ಷದ ಸಂದುತ್ತಿರುವ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚರಬಸವತಾತನವರಿಗೆ ಅತ್ಯಂತ ಪ್ರಿಯವಾಗಿದ್ದ ಕೈಯಲ್ಲಿ ಹಿಡಿದು ನಡೆಯುತ್ತಿದ್ದ ಬೆತ್ತವನ್ನು ಅವರ ಗದ್ದುಗೆಗೆಳಿರುವ ಗ್ರಾಮಗಳಾದ ಅನವಾರ,ಮಾರಡಗಿ,ಯಳವಾರ, ಕೆಲ್ಲೂರು ಗ್ರಾಮಗಳಿಗೆ ಶ್ರೀಮಠದಿಂದ ತಲುಪಿಸಲಾಗಿದೆ.

ಏ ೬ರಂದು ಜರುಗುವ ರಥೋತ್ಸವ ದಿನದಂದು ಮದ್ಯಾಹ್ನ ೪ಗಂಟೆಯ ಸುಮಾರಿಗೆ ಆಯಾ ಗ್ರಾಮಗಳ ಭಕ್ತಾಧಿಗಳಿಂದ ಬೆತ್ತವನ್ನು ಅದ್ದೂರಿ ಮೆರವಣಿಗೆ ಮೂಲಕ ನಗರದ ಬಸವೇಶ್ವರ ವೃತ್ತಕ್ಕೆ ತಲುಪುವುದು. ತದನಂತರ ಭಾಜಾ ಭಜಂತ್ರಿಯೊAದಿಗೆ ಅವುಗಳನ್ನು ರಥೋತ್ಸವದ ಮುನ್ನ ಗದ್ದುಗೆಗೆ ತಲುಪಿಸಿ ರಥದಲ್ಲಿಟ್ಟು ಸಂಜೆ ೬ಗಂಟೆಗೆ ರಥೋತ್ಸವ ನಡೆಸಲಾಗುವುದು ಎಂದು ಶ್ರೀಮಠದ ಪೀಠಾಧಿಪತಿ ಬಸವಯ್ಯ ಶರಣರು ತಿಳಿಸಿದ್ದಾರೆ. ಚರಬಸವತಾತನವರ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭವ್ಯ ರಥೋತ್ಸವದಲ್ಲಿ ಪಾಲ್ಗೊಂಡು ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರಿದ್ದಾರೆ.

About The Author