ಹಗರಣಗಳ ತಾಣವಾದ ಕೆಲ ಗ್ರಾಮ ಪಂಚಾಯತಗಳು..! : ತನಿಖಾ ಹಂತದಲ್ಲಿರುವಾಗಲೆ ಮತ್ತೆ ಚಾರ್ಜ್ ತೆಗೆದುಕೊಳ್ಳುತ್ತಿರುವ ಪಿಡಿಒ ! ಆರೋಪ

ವಿಷಯಗಳು
* ಹಗರಣಗಳ ತಾಣವಾದ ಕೆಲ ಗ್ರಾಮ ಪಂಚಾಯಿತಿಗಳು.
* ತನಿಖಾ ಹಂತದಲ್ಲಿರುವಾಗಲೆ ಪುನಃ ಚಾರ್ಜ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳು.
* ನಾಗನಟಗಿ ಗ್ರಾಮ ಪಂಚಾಯಿತಿ : ಮೂವರು ಪಿಡಿಓಗಳ ತನಿಖೆ ಬಾಕಿ.ಭ್ರಷ್ಟಾಚಾರ ಎಸಗಿದರ ವಿರುದ್ಧ ಸೂಕ್ತ ಕ್ರಮವಿಲ್ಲ ಆರೋಪ.
* ಮದ್ದರಕಿ ಗ್ರಾಮ ಪಂಚಾಯಿತಿ : 14 ನೇ ಹಣಕಾಸು ಯೋಜನೆಯಲ್ಲಿ ಭ್ರಷ್ಟಾಚಾರ ! ತನಿಖೆ ಹಂತದಲ್ಲಿರುವಾಗಲೆ ಪಿಡಿಓ ವರ್ಗಾವಣೆ.

*******

ಶಹಾಪುರ : ತಾಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ  ತಾಂಡವಾಡುತ್ತಿದೆ.ಮದ್ದರಕಿ,ನಾಗನಟಗಿ,ತಡಿಬಿಡಿ  ಸೇರಿದಂತೆ ಇತರ ಗ್ರಾಮ ಪಂಚಾಯಿತಿಗಳಲ್ಲಿ 14 ಮತ್ತು 15 ನೇ ಹಣಕಾಸು ಯೋಜನೆಗೆ ಸರಕಾರ ಗ್ರಾಮೀಣಾಭಿವೃದ್ಧಿಗಾಗಿ ಲಕ್ಷಾನುಗಟ್ಟಲೆ ಹಣ ನೀಡುತ್ತಿದೆ.ಆ ಹಣವನ್ನು ಅಧಿಕಾರಿಗಳು  ಸರಿಯಾಗಿ ಬಳಕೆ ಮಾಡಿಕೋಳ್ಳುತ್ತಿಲ್ಲ ಎನ್ನಲಾಗುತ್ತಿದ್ದೆ ?.ಇತ್ತಿಚೆಗೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಲಕ್ಷಾನುಗಟ್ಟಲೆ ಹಣ ದುರುಪಯೋಗವಾಗಿದೆ.ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನುತು ಮಾಡಲಾಗಿದೆ.ದುರುಪಯೋಗದ ಹಣದ ತನಿಖೆ ನಡೆಯುತ್ತಿರುವಾಗಲೆ ಅಮಾನತು ಆದ ಪಿಡಿಒ ರವರಿಗೆ ಪಂಚಾಯಿತಿ ಜವಾಬ್ದಾರಿ ಕೊಡುತ್ತಿರುವುದು ದುರದೃಷ್ಟಕರ.

      ಇತ್ತಿಚೆಗೆ ತಾಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿಯು ಹಗರಣಗಳ ತಾಣವಾಗಿ ಮಾರ್ಪಟ್ಟಿದೆ. 2017 ರಿಂದ 2022 ರವರೆಗೆ ಸುಮಾರು ಮೂವರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ.ಪಿಡಿಒ ರನ್ನು ಅಮಾನತು ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಆದರೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ತಾಲೂಕು ಅಧ್ಯಕ್ಷ ಅರುಣ ಕುಮಾರ ದೊಡ್ಡಮನಿ ಆರೋಪಿಸುತ್ತಿದ್ದಾರೆ.ತಾಲೂಕು ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ದಲಿತ ಸಂರಕ್ಷ ಸಮಿತಿ ತಾಲೂಕು ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಿ ತಾಲೂಕು ಪಂಚಾಯತ್ ಯೋಜನಾ ಅಧಿಕಾರಗಳಿಗೆ ಮನವಿ ಪತ್ರ ಸಲ್ಲಿಸಿ  ಮಾತನಾಡಿದರು.
 * 2017-19 ರಲ್ಲಿ ಪಿಡಿಓ  ಜ್ಞಾನಮಿತ್ರನ ಅವಧಿ.
53.30 ಲಕ್ಷ ರೂ.ದುರುಪಯೋಗ.
* ಅಣ್ಣಾರಾವ್ ಪಿಡಿಓ–17 ಲಕ್ಷ ದುರುಪಯೋಗ.
* ವಸಂತಕುಮಾರ್ ಪಿಡಿಓ ಅವಧಿಯಲ್ಲೂ ಲಕ್ಷಾಂತರ ಅವ್ಯವಹಾರ.
         ಈ ಮೂರು ಜನ ಪಿಡಿಓ ಅವಧಿಯಲ್ಲಿ ಲಕ್ಷಾಂತರ ಅವ್ಯವಹಾರ ನಡೆದಿದೆ ಎಂದು ದಾಖಲೆಗಳ ಸಮೇತ ದೂರು ಕೊಟ್ಟರು ತನಿಖಾಧಿಕಾರಿಗಳು ಸರಿಯಾಗಿ ತನಿಖೆ ನಡೆಸಿಲ್ಲ.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅನುದಾನ ಮರುಪಾವತಿ ಮಾಡಿಸುವಲ್ಲಿ ಶ್ರಮಿಸುತ್ತಿಲ್ಲ. ಭ್ರಷ್ಟಾಚಾರ ಎಸೆಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
            ವಾರ್ಷಿಕವಾಗಿ ಪಂಚಾಯತಿಗೆ ಬರುವ ಅನುದಾನಕ್ಕೆ ಬೇಕಾಬಿಟ್ಟಿಯಾಗಿ ವೋಚರ್ ಸೃಷ್ಟಿಸಿ ಭ್ರಷ್ಟಾಚಾರ ಮಾಡುತ್ತಿದ್ದಾರೆ.ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಅನುದಾನ ಸರ್ಕಾರಕ್ಕೆ ಮರುಪಾವತಿ ಮಾಡಿಸುತ್ತಿಲ್ಲ. ಇದು ಮೇಲಾಧಿಕಾರಿಗಳ ಮೇಲೆ
ಜನಸಾಮಾನ್ಯರು ಅನುಮಾನ ಪಡುವ ವಾತಾವರಣ ಸೃಷ್ಟಿಯಾಗಿದೆ ಎಂದರು.
        ತಾಲೂಕಿನಾದ್ಯಂತ‌  ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಕಲಿ ರಸೀದಿ ಪಡೆದು ನೀರು ನಿರ್ವಹಣೆ ಮತ್ತು ಸ್ವಚ್ಛತೆ ಸಂಬಂದ ಲಕ್ಷಾಂತರ ರೂಪಾಯಿ ಅನುದಾನ ಕೊಳ್ಳೆ ಹೊಡೆಯುತ್ತಿದ್ದಾರೆ. ಅಧ್ಯಕ್ಷ, ಪಿಡಿಓ ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅವರಿಗೆ ಬಿಲ್ ಮಾಡಿದ ಅನುದಾನದಲ್ಲಿ ಶೇಕಡಾವಾರು ಹಂಚಿಕೆಯಾಗುತ್ತೆಯಾ ?. ನಾಗನಟಗಿ ಪಂಚಾಯತಿ ಆರೋಪಗಳು ಇದಕ್ಕೆ ಪುಷ್ಟಿಸಿಕ್ಕಂತಾಗಿವೆ.ಆರೋಪ ಬಂದ ಕೂಡಲೇ ಪಿಡಿಓ ಅವರನ್ನು ಅಮಾನತು ಮಾಡಿ ಒಂದು ವಾರ ಅಥವಾ ತಿಂಗಳಲ್ಲೇ ಸೇವೆಗೆ ಮರು ಆದೇಶ ಹೊರಡಿಸುವ ಚಾಳಿ ಮುಂದುವರೆದಿದೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.
ಭ್ರಷ್ಟಾಚಾರ ಮಾಡಿದ ಪಿಡಿಓ ಅವರಿಗೆ ಅಮಾನತು ಮಾಡಿದರೆ ಸಾಲದು. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ದುರುಪಯೋಗ ಮಾಡಿದ ಅನುದಾನ ಮರುಪಾವತಿ ಮಾಡುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ  ಪಂಚಾಯತಿಗೆ ಅನುದಾನ ಜನರ ಅಭಿವೃದ್ಧಿ ಕಾಣುವ ಬದಲು ಅಧಿಕಾರ ಮತ್ತು ಜನಪ್ರತಿನಿಧಿಗಳ ಪಾಲಾಗುತ್ತಿದೆ.
ಅರುಣ ಕುಮಾರ ದೊಡ್ಡಮನಿ. 
ದಲಿತ ಸಂರಕ್ಷ ಸಮಿತಿ ತಾಲೂಕು  ಅಧ್ಯಕ್ಷರು ಶಹಾಪುರ.
ಮದ್ದರಕಿ ಗ್ರಾಮ ಪಂಚಾಯತಿಯಲ್ಲಿ 14 ನೇ ಹಣಕಾಸು ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿತ್ತು.ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಲಕ್ಷಾನುಗಟ್ಟಲೆ ಹಣವನ್ನು ದುರುಪಯೋಗ ಮಾಡಿಕೊಂಡು ಬಿಲ್ ಪಾವತಿಸಿ ಕೊಂಡಿದ್ದಾರೆ ಎಂದು ಹಲವು ಸಂಘಟನೆಗಳು ಆರೋಪ ಮಾಡಿದ್ದವು.ಜಿಲ್ಲಾ ಪಂಚಾಯಿತಿ ಕಡೆಯಿಂದಲೂ ತನಿಖೆ ಚುರುಕುಗೊಂಡಿತ್ತು.ಪಿಡಿಓರವರನ್ನು ಬೇರೆ ಕಡೆ ವರ್ಗಾವಣೆ ಮಾಡಿ ಕೈ ತೊಳೆದುಕೊಂಡರು.ಇಲ್ಲಿ ಅಧಿಕಾರಿಗಳು ಸೇಫ್.ಇದೆ ರೀತಿಯಾದರೆ ಗ್ರಾಮಿಣಾಭಿವೃದ್ಧಿಯಾಗುವುದಿಲ್ಲ ಎಂದು ಸಾರ್ವಜನಿಕರು ಅಂದಾಡಿಕೊಳ್ಳುತ್ತಿದ್ದಾರೆ.