ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ದಿನಾಂಕ 27.11.2022 ರ ರವಿವಾರದಂದು ಇಪ್ಪತ್ತೈದನೆಯ ‘ ಶಿವೋಪಶಮನ ಕಾರ್ಯ’ ಕ್ರಮವು ನಡೆಯಿತು.

ಗಬ್ಬೂರು ಮತ್ತು ದೂರ ದೂರದ ಊರುಗಳಿಂದ ಬಂದಿದ್ದ ನೂರಾರು ಜನ ಭಕ್ತರು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಂದ’ ಶಿವೋಪಶಮನ’ ಪಡೆದು ಸಂಕಷ್ಟಮುಕ್ತರಾದರು.

ಇದೇ ಸಂದರ್ಭದಲ್ಲಿ ದಾಸೋಹಕ್ಕೆ ದೇಣಿಗೆ ನೀಡಿದ ಬಸವರಾಜ ಕರೆಗಾರ ಮತ್ತು ಶ್ರೀಕ್ಷೇತ್ರದ ದಾಸೋಹ ಕಾರ್ಯಕ್ಕೆ 101 ಸ್ಟೀಲ್ ಗ್ಲಾಸ್ ಗಳ ಕೊಡುಗೆ ಸೇವೆ ನೀಡಿದ ರಘುನಂದನ್ ಪೂಜಾರಿ ಅವರಿಬ್ಬರನ್ನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.