ಡಿಡಿಯು ಶಿಕ್ಷಣ ಸಂಸ್ಥೆ : ರಾಜ್ಯ ಮಟ್ಟದ ಕರಾಟೆಯಲ್ಲಿ ಸಂದೀಪ 3 ನೇ ಸ್ಥಾನ

ಶಹಾಪುರ : ಶಹಾಪುರ ತಾಲೂಕಿನ ಡಿಡಿಯು ಶಿಕ್ಷಣ ಸಂಸ್ಥೆ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾದ ಕುಮಾರ್ ಆಯುಷ್ ತಂದೆ ಸಂದೀಪ ಪಾನಿಬಾತೆ ಎಂಬ ವಿದ್ಯಾರ್ಥಿ 21ನೇ ಕರ್ನಾಟಕ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಡಾ.ಭೀಮಣ್ಣ ಮೇಟಿ, ಕಾರ್ಯದರ್ಶಿಗಳಾದ ದೇವಿಂದ್ರಪ್ಪ ಮೇಟಿ ಹಾಗೂ ಪ್ರಾಂಶುಪಾಲರು, ಶಿಕ್ಷಕ ವೃಂದದವರು ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *