ಮಹಾಶೈವ ಧರ್ಮಪೀಠದಲ್ಲಿ ಡಿ.2 ರಂದು ಕಾಳಿಕಾದೇವಿ ಮೂರ್ತಿ ಪ್ರತಿಷ್ಠಾಪನಾ ನಿಮಿತ್ತ ಮಂಗಳವಾರದಂದು ಮೂರ್ತಿ ಮೆರವಣಿಗೆ ಕಾರ್ಯಕ್ರಮ

ಗಬ್ಬೂರು : ಮಹಾಶೈವ ಧರ್ಮಪೀಠ ಸುಕ್ಷೇತ್ರ ಕೈಲಾಸ ಗಬ್ಬೂರಿನಲ್ಲಿ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ  ರವರ ಸನ್ನಿಧಿಯಲ್ಲಿ ಡಿಸೆಂಬರ 2 ರ ಶುಕ್ರವಾರ ದಂದು ಶ್ರೀ ಕಾಳಿಕಾಂಬದೇವಿ ಮೂರ್ತಿ  ಪ್ರತಿಷ್ಠಾಪಿಸುವ ನಿಮಿತ್ತ ನ.29 ರ ಮಂಗಳವಾರ ದಂದು ಬೆ.11-00 ಗಂಟೆಗೆ ಮಹಾ ಕಾಳಿಕಾದೇವಿ ಮೂರ್ತಿ ಮೆರವಣಿಗೆ ಕಾರ್ಯಕ್ರಮವಿದ್ದು, ಗ್ರಾಮದ ಹೊಸ ಬಸ್ ನಿಲ್ದಾಣದ ಕ್ರಾಸ್ ದಿಂದ ಹೊಸ ಬಸ್ ನಿಲ್ದಾಣದ ಮುಖಾಂತರ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆ ಮೂಲಕ ಮಹಾಶೈವ ಪೀಠದ ದೇವಿಯ ಮೂಲ ಸ್ಥಾನವಾದ ಮಹಾಶೈವ ಧರ್ಮಪೀಠಕ್ಕೆ ಬಂದು ತಲುಪಲಿದೆ.
ಮಹಾಶೈವ ಪೀಠದ ಭಕ್ತ ಮಂಡಳಿ ಮತ್ತು ಗಬ್ಬೂರು ಹಾಗೂ  ಸುತ್ತಲಿನ ಗ್ರಾಮಸ್ಥರು ಮೆರವಣಿಗೆಯಲ್ಲಿ
ಭಾಗವಹಿಸಿ ಶ್ರೀ ಕಾಳಿಕಾಂಬಾ ಮಾತೆಯ ಕೃಪೆಗೆ ಪಾತ್ರರಾಗಿ, ಕಾರ್ಯಕ್ರಮ  ಯಶಸ್ವಿಗೊಳಿಸಬೇಕೆಂದು ಮಹಾಶೈವ ಧರ್ಮ ಪೀಠವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪೂಜ್ಯರು,ಮಹಾಶೈವ ಧರ್ಮಪೀಠದ ಭಕ್ತ ಮಂಡಳಿಯವರು ಇದ್ದರು.

Leave a Reply

Your email address will not be published. Required fields are marked *