ರಾಜ್ಯಮಟ್ಟದ ಪ್ರತಿಷ್ಠಿತ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿಗೆ ಐದು ಶ್ರೇಷ್ಠ ಕೃತಿಗಳ ಆಯ್ಕೆ ಹಾಗೂ ವಿವಿಧ ಕ್ಷೇತ್ರದ ಐವರು ಸಾಧಕರಿಗೆ ವಿಶೇಷ ಗೌರವ ಪುರಸ್ಕಾರ

ಶಹಾಪುರ- ಕಳೆದ ಎಂಟು ವರ್ಷಗಳಿಂದ ತಮ್ಮ ತಂದೆಯ ಸ್ಮರಣಾರ್ಥವಾಗಿ ನಡೆಸಿಕೊಂಡು ಬಂದ ರಾಜ್ಯಮಟ್ಟದ ಪ್ರತಿಷ್ಠಿತ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಾಜ್ಯ ಮಟ್ಟದಲ್ಲಿ ಪುರಸ್ಕಾರ ನೀಡಲು ವಿವಿಧ ಪ್ರಕಾರದ ಕೃತಿಗಳನ್ನು ಅಹ್ವಾನಿಸಲಾಗಿತ್ತು. ನೂರಾರು ಕೃತಿಗಳು ಪುರಸ್ಕಾರದ ಪರಿಶೀಲನೆಗೆ‌ ಬಂದಿದ್ದವು.ಅದರಲ್ಲಿ ಈ ಕೆಳಕಂಡ ಲೇಖಕ-ಲೇಖಕಿಯರ ಐದು ಕೃತಿಗಳು‌ ಅಂತಿಮ ಸುತ್ತಿನಲ್ಲಿ ಆಯ್ಕೆಯಾಗಿದ್ದು ಬರುವ ಡಿಸೆಂಬರ್ ೧೧ ರಂದು ರವಿವಾರ ಕನ್ನಡ ಸಾಹಿತ್ಯ ಪರಿಷತ್ ಭವನ ಶಹಾಪುರದಲ್ಲಿ ಮು.೧೦-೩೦ ಗಂಟೆಗೆ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಿದ್ಧರಾಮ ಹೊನ್ಕಲ್ ಸಾಹಿತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಖ್ಯಾತ ಕಥೆಗಾರ ಬಸವಣ್ಣೆಪ್ಪ ಕಂಬಾರ ಬೆಳಗಾಂ ಜಿಲ್ಲೆ ಅವರ ಆರನೇ ಬೆರಳು ಕಥಾಸಂಕಲನ*

*ಖ್ಯಾತ ಲೇಖಕಿ ಮಮತಾ ಅರಸಿಕೆರೆ ಹಾಸನ ಅವರ ಒಳಗೂ ಹೊರಗೂ ಅವರ ಮಹಿಳಾ ಸಂವೇದನೆ ಬರಹಗಳ ಸಂಕಲನ*

*ಡಾ.ಶಿವರಾಮ ಅಸುಂಡಿ ಧಾರವಾಡ ಅವರ ಚಿತ್ರಂ ಭಳಾರೆ ವಿಚಿತ್ರಂ ಲಲಿತ ಪ್ರಬಂಧ ಸಂಕಲನ*

*ಖ್ಯಾತ ಲೇಖಕ ಅಬ್ದುಲ್ ಹೈ ತೋರಣಗಲ್ಲು ಬಳ್ಳಾರಿ ಅವರ ಆತ್ಮ ಧ್ಯಾನದ ನಾದ ಗಜಲ್ ಸಂಕಲನ*

*ಹಿರಿಯ ಲೇಖಕ ಸಂಗಮೇಶ ಬಾದವಾಡಿಗಿ ಬೆಂಗಳೂರು ಅವರ ರೊಟ್ಟಿ ಪಂಚಮಿ ಕಾವ್ಯ ಸಂಕಲನ*

ಹೀಗೆ ಈ ಐದು ಕೃತಿಗಳು ಹಾಗೂ ಈ ಕೃತಿಗಳ ಲೇಖಕರಿಗೆ ಪ್ರಶಸ್ತಿಯ ಜೊತೆಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ,ನೆನಪಿನ ಕಾಣಿಕೆ ಹಾಗೂ ವಿಶೇಷ ಸನ್ಮಾನ ಮಾಡಿ ಗೌರವಿಸಲಾಗುವುದು.

ಇನ್ನೂ ಈ ವರ್ಷದಿಂದ ಅಗಲಿದ ತಾಯಿಯ ಸ್ಮರಣಾರ್ಥ ಆರಂಭಿಸಲಾದ ವಿಶೇಷ ಗೌರವ ಪುರಸ್ಕಾರಕ್ಕೆ ಈ ಕೆಳಗಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರ್ತಿಸಲಾಗಿದೆ.

*ಶರಣು ಬಿ ಗದ್ದುಗೆ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕದ ಅಧ್ಯಕ್ಷರು-ಹಾಗೂ ಕಾಯಕ ದಾಸೋಹಿ ಮಹಾತ್ಮ ಚರಬಸವ ಸಂಸ್ಥಾನದ ಕುಡಿ ಶಹಾಪುರ ಇವರ ನಾಡು ನುಡಿ ಒಟ್ಟಾರೆ ಕನ್ನಡ ಸೇವೆಗಾಗಿ*

*ಡಾ.ಸತೀಶ ಹೊಸಮನಿ ಬೀದರ. ನಿರ್ದೇಶಕರು ಕೇಂದ್ರ ಗ್ರಂಥಾಲಯ ಇಲಾಖೆ ಬೆಂಗಳೂರು ಅವರ ಜಾಗತಿಕ ಮಟ್ಟದ ಅಪೂರ್ವ ಡಿಜಿಟಲ್ ಸೇವೆ ಹಾಗೂ ಸಾಧನೆಗಾಗಿ*

*ಡಾ.ಚೆನ್ನಾರೆಡ್ಡಿ ಪಾಟೀಲ ಕುರುಕುಂದಾ ಶಹಾಪುರ ತಾಲೂಕಾ, ಅಧ್ಯಕ್ಷರು,ಸರ್ವಜ್ಞ ಶಿಕ್ಷಣ ಸಂಸ್ಥೆ ಕಲಬುರ್ಗಿ ಇವರ ಅಪಾರ ಶಿಕ್ಷಣ ಕ್ಷೇತ್ರದ, ಹಾಗೂ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಉನ್ನತ ಸೇವೆ ಹಾಗೂ ಸಾಧನೆಗಾಗಿ*

*ಪ್ರಭುಲಿಂಗ ನೀಲೂರೆ ಆಳಂದ.ಬಾಲವಿಕಾಸ ಅಕಾಡೆಮಿಯ ಚಂದಿರ ಪ್ರಶಸ್ತಿ ಪುರಸ್ಕೃತ ಬಹುಮುಖಿ ಪ್ರಕಾರದ ಲೇಖಕ.ಇವರ ಸಾಂಸ್ಕೃತಿಕ,ಸಾಹಿತ್ಯಿಕ ಹಾಗೂ ಪತ್ರಿಕಾ ಸೇವೆಯ ಸಾಧನೆಗಾಗಿ.ಇವರು ಕರ್ನಾಟಕ ಸರ್ಕಾರವೇ ಶ್ರೀ ವಿಜಯ ಪುರಸ್ಕಾರ‌ ನೀಡುವಂತೆ ಮಾಡಿದ ಗಟ್ಟಿಗ*

*ಬಿ.ಎಚ್.ನಿರಗುಡಿ, ಪ್ರಾಚಾರ್ಯರು ಸತ್ಯಂ ಶಿಕ್ಷಣ ಸಂಸ್ಥೆ, ಹಾಗೂ ಸಂಪಾದಕ ಸಾಹಿತ್ಯ ಸಾರಥಿ ಪತ್ರಿಕೆ ಕಲಬುರ್ಗಿ ಇವರ‌ ಸಾಹಿತ್ಯಿಕ, ಸಾಂಸ್ಕೃತಿಕ ಸಾಧನೆಗಾಗಿ*

ಹೀಗೆ ಐದು ಜನಮುಖಿ ಸಾಧಕರಿಗೆ‌ ಇದೇ‌ ಸಂದರ್ಭದಲ್ಲಿ ವಿಶೇಷ ಗೌರವ‌ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು‌ ಶ್ರೀ‌ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಯ್ಕೆ ಸಮಿತಿಯ ಪರವಾಗಿ ಲೇಖಕ ಸಿದ್ಧರಾಮ ಹೊನ್ಕಲ್ ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.ಅಲ್ಲದೆ‌ ಈ ಪುರಸ್ಕೃತರಿಗೆ ಅವರ ಸಹೋದರರಾದ‌ ವಿಜಯಕುಮಾರ್ ಹೊನ್ಕಲ್,ಜಗದೀಶ ಹೊನ್ಕಲ್, ಮತ್ತು ಪ್ರತಿಷ್ಠಾನದ ಕಾರ್ಯದರ್ಶಿ ಬಸವಪ್ರಭು ಹೊನ್ಕಲ್ ಹಾಗೂ ಆಯ್ಕೆ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.

ಸಿದ್ಧರಾಮ ಹೊನ್ಕಲ್
9945922151

About The Author