ಕರ್ನಾಟಕ ಕಾಂಗ್ರೆಸ್ ನಿಂದ ಯಾದಗಿರಿ ಸೇರಿದಂತೆ ಐದು ಜಿಲ್ಲಾಧ್ಯಕ್ಷರ ನೇಮಕ

ಬೆಂಗಳೂರು : ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು AICC ಅಧ್ಯಕ್ಷರಾದ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಯಾದಗಿರಿ ಸೇರಿದಂತೆ ಐದು ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಜನರಲ್ ಸೆಕ್ರೆಟರಿ ವೇಣುಗೋಪಾಲ್ ರವರು ಆದೇಶ ಹೊರಡಿಸಿದ್ದಾರೆ. ಯಾದಗಿರಿ- ಬಸರೆಡ್ಡಿ ಅನಪೂರ, ಬೆಂಗಳೂರು ಗ್ರಾಮಾಂತರ – ಸಿ.ಆರ್. ಗೌಡ, ಕೊಡಗು – ಧರ್ಮಜಾ ಉತಪ್ಪ, ತುಮಕೂರು- ಚಂದ್ರಶೇಖರ್ ಗೌಡ ಹಾಸನ – ಈ. ಎಚ್. ಲಕ್ಷ್ಮಣ ರವರನ್ನು ನೇಮಕ ಮಾಡಲಾಗಿದೆ.

ಗುರುಮಿಠಕಲ್ ವಿಭಾಗದಲ್ಲಿ ಕಾಂಗ್ರೆಸ್ಸಿನ ಪ್ರಭಾವಶಾಲಿ ರಾಜಕಾರಣಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಸರೆಡ್ಡಿ ಅನಪೂರ AICC ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರ ಆಪ್ತರು.2023ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ದೃಷ್ಟಿಯಿಂದ ಕಾಂಗ್ರೆಸ್ ನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಯಾದಗಿರಿ ಹೊಸ ಜಿಲ್ಲೆಯಾದಗಿನಿಂದ ಮರಿಗೌಡ ಹುಲ್ಕಲ್ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಸತತವಾಗಿ 10 ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾದ ಮರಿಗೌಡ ಹುಲ್ಕಲ್ ರವರ ನಂತರ ಬಸರೆಡ್ಡಿ ರವರನ್ನು ಕಾಂಗ್ರೆಸ್ ಪಕ್ಷದ ಯಾದಗಿರಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *