ಗ್ರಾಮೀಣ ಅಭಿವೃದ್ಧಿಯೇ ನನ್ನ ಗುರಿ : ಮತಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ : ಶರಣಬಸಪ್ಪಗೌಡ ದರ್ಶನಾಪುರ

ಶಹಾಪುರ : ಗ್ರಾಮೀಣ ಅಭಿವೃದ್ದಿಯೇ ನಮ್ಮ ಗುರಿಯಾಗಿದ್ದು, ನನ್ನ ಮತ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ ಪ್ರತಿ ಗ್ರಾಮೀಣ ಭಾಗಕ್ಕೂ ಹೆಚ್ಚಿನ ಒತ್ತು ನೀಡಿ ಮೂಲಭೂತ ಸೌಕರ್ಯಗಳನ್ನು ಒಸಗಿಸಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

   ತಾಲೂಕಿನ ಅಣಬಿ ಗ್ರಾಮದಲ್ಲಿ ಕೆಕೆಆರ್‍ಡಿಬಿ ಯೋಜನೆ ಯಡಿ 50 ಲಕ್ಷ ರೂ ವೆಚ್ಚದಲ್ಲಿ ನಾಲ್ಕು ಶಾಲಾ ಕೋಣೆ ಉದ್ಘಾಟನೆ, ವಕ್ರ್ಫ ಬೋರ್ಡ್‍ನಲ್ಲಿ ಕಬರ್ಸ್ಥಾನದ ಕಾಂಪೌಂಡ್ ಗೋಡೆ ಅಡಿಗಲ್ಲು, 5 ಲಕ್ಷ ರೂ ವೆಚ್ಚದಲ್ಲಿ ಅಲ್ಪಸಂಖ್ಯಾತರ ರುದ್ರಭೂಮಿ, ನಿರ್ಮಿತಿ ಕೇಂದ್ರದಲ್ಲಿ 40 ಲಕ್ಷ ರೂ ವೆಚ್ಚದ ಸಿಸಿ.ರಸ್ತೆ ಮತ್ತು ಚರಂಡಿ, 4 ಕೋಟಿ ರೂ ವೆಚ್ಚದಲ್ಲಿ ಜೆಜೆಎಂ ಕಾಮಗಾರಿಯನ್ನು ವಿಕ್ಷೀಸಿ ಮಾತನಾಡಿದ ಅವರು ಜನೋಪಯೋಗಿ ಕೆಲಸ ಮಾಡುವುದು ಮೂಲ ಗುರಿ. ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಬದ್ಧನಾಗಿದ್ದೇನೆ.

ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು,ಮತಕ್ಷೇತ್ರದ ಗ್ರಾಮೀಣ ಭಾಗದ ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಲು ಗಮನ ಹರಿಸಬೇಕು ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು. ಜನರ ಬೇಡಿಕೆಗೆ ತಕ್ಕಂತೆ ಶಿಕ್ಷಣ, ಆರೋಗ್ಯ, ರಸ್ತೆಗಳ ನಿರ್ಮಾಣ ಸೇರಿದಂತೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಶ್ರಮಿಸಲಾಗುತ್ತಿದೆ. ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯು ಪ್ರಗತಿಯಲ್ಲಿದ್ದು ಗುಣಮಟ್ಟದಿಂದ ಸಕಾಲಕ್ಕೆ ಪೂರ್ಣಗೊಳಿಸಿ ಜನತೆಗೆ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ವಾಯ್.ಪಿ ಚಿಪ್ಪಾರ, ಮರೆಪ್ಪ ಪ್ಯಾಟಿ, ಗ್ಯಾನಪ್ಪ ಅಣಬಿ, ಪಿಆರ್‍ಇ ಎಇ ವಾಸುದೇವ, ನಿರ್ಮಿತಿ ಕೇಂದ್ರದ ಎಇಇ ರಾಮಣಗೌಡ, ರಾಮರಾವ್ ಕುಲ್ಕರ್ಣಿ, ಇಸ್ಮಾಲ್ ಚಾಂದ್, ಮಹೀದ್ರ ಪಟೇಲ್, ಗ್ರಾ.ಪಂ ಅಧ್ಯಕ್ಷರಾದ ಸಂಗೀತಾ ರಾಜು ಮಾಡಿಗಿ, ಶರಣಗೌಡ, ವಿಜಯ ಚಿಗರಿ, ಜ್ಞಾನಪ್ಪ ಮ್ಯಾಗೇರಿ, ಸೋಮಣ್ಣಗೌಡ ಚೆನ್ನಶೆಟ್ಟಿ, ಮಲ್ಲಿಕಾರ್ಜುನ ಸಜ್ಜನ್, ಗುರುಬಸ್ಸು ರಂಗಂಪೇಠ, ಮೈಬೂಬ ಕುರಾನ್ ಬುಡ್ಡಿ, ಮೋದೀನ್ ಪಟೇಲ್ ಅಣಬಿ, ಸಾಯಿಬಾಬ ಮುದೋಳ, ಶಿವಯೋಗಿ ಸನ್ನತಿ, ಅಯ್ಯಪ್ಪ ದೋಡ್ಮನಿ, ಮಲ್ಲಯ್ಯಸ್ವಾಮಿ ಇಟಗಿ, ವಿರೇಶ ಮದ್ರಿ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

About The Author