ಹಿರೇದಿನ್ನಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಕನಕ ಜಯಂತಿ

ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ ಹೀರೆದಿನ್ನಿ ಗ್ರಾಮದಲ್ಲಿ ಕನಕ ಜಯಂತಿಯನ್ನು ಗ್ರಾಮದ ಯುವಕರ ಮುಂದಾಳತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಗ್ರಾಮದ ಶ್ರೀ ಮಾವುರದ ಯಲ್ಲಮ್ಮದೇವಿ ದೇವಸ್ಥಾನದಿಂದ ಹೀರೆದಿನ್ನಿ ಕ್ಯಾಂಪ್ ನ ವರೆಗೆ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕನಕದಾಸರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.ಮಕ್ಕಳಿಗೆ ಕನಕ ವೇಷ,ಕಿತ್ತೂರಿ ರಾಣಿ ಚೆನ್ನಮ್ಮ, ಒನಕೆ ಓಬವ್ವ,ಕನ್ನಡ ಮಾತೆ,ವೇಷಧಾರಿಯಾಗಿ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸ್ವಯಂ ಇಚ್ಛೆಯಿಂದ ಬಸವರಾಜ ದೇವರಮನಿ, ತಿಮ್ಮಣ್ಣ ಕಟಾಲಿ, ಯಲ್ಲಪ್ಪ ಅರಳಿಬಂಡಿ ಅವರಿಂದ ಪ್ರಸಾಧ ವ್ಯವಸ್ಥೆ ಯನ್ನು ಮಾಡಲಾಗಿತ್ತು. ಹಿರಿಯರು ಮಹಿಳೆಯರು ಮಕ್ಕಳು ಹಾಗೂ ಗ್ರಾಮದ ಯುವಕರು ದ್ರುವ ಬಾಯ್ಸ್ ತಂಡ ಕಿಚ್ಚ ಬಾಯ್ಸ್ ತಂಡ ಡಿ.ಬಾಸ್ ಬಾಯ್ಸ್ ತಂಡ RCB ಅಭಿಮಾನಿಗಳು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ ಹಾಗೂ ಗ್ರಾಮದ ಸರ್ಕಾರಿ ನೌಕರರು ಭಾಗವಹಿಸಿದ್ದರು.

 

About The Author