ನ.21 ರಂದು ಅತ್ತನೂರು ಶ್ರೀ ದಿಡ್ಡಿ ಬಸವೇಶ್ವರ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ

ರಾಯಚೂರು :ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಆರಾಧ್ಯದೈವ ಶ್ರೀ ದಿಡ್ಡಿಬಸವೇಶ್ವರ ದೇವಸ್ಥಾನದಲ್ಲಿಯೇ ಮೊದಲ ಬಾರಿಗೆ ಕಾರ್ತಿಕ ಮಾಸ ಪ್ರಯುಕ್ತ ನವೆಂಬರ್ 21 ರಂದು ಸಹಸ್ರ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು,ಅಂದು ಸಂಜೆ ನಾಲ್ಕು ಗಂಟೆಯಿಂದ ಪೂಜ್ಯರಾದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಉತ್ಸವ ಸಕಲ ವಾದ್ಯಗಳೊಂದಿಗೆ ಸೋಮವಾರ ಪೇಟೆ ಹಿರೇಮಠದಿಂದ ಆರಂಭಿಸಿ ಶ್ರೀ ದಿಡ್ಡಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಂಜೆ 6 ಗಂಟೆಗೆ ಸಹಸ್ರ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ದಿಡ್ಡಿ ಬಸವೇಶ್ವರ‌ ಟ್ರಸ್ಟ್ ಅಧ್ಯಕ್ಷರಾದ ವೀರಭದ್ರಯ್ಯ ಸ್ವಾಮಿ ಅತ್ತನೂರು ಪ್ರಕಟಣೆಯಲ್ಲಿ ತಿಳಿಸಿದರು.

 

ಅಂದಿನ ಕಾರ್ಯಕ್ರಮದಲ್ಲಿ ಪೂಜ್ಯರಾದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರ ಪೇಟೆ ಹಿರೇಮಠ ಅತ್ತನೂರು ರಾಯಚೂರು, ಡಾ. ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ನೀಲಗಲ್ ಎನ್ ಗಣೇಕಲ್, 108 ಸಾವಿರ ದೇವರು ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು 108 ಸಾವಿರ ದೇವರ ಸಂಸ್ಥಾನ ಕಿಲ್ಲೆ ಬ್ರಹನ್ಮಠ ರಾಯಚೂರು
ಶ್ರೀ ಬೂದಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬೂದಿಬಸವೇಶ್ವರ ಸಂಸ್ಥಾನ ಮಠ ಗಬ್ಬೂರು ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ನವಲಕಲ್ ಅಭಿನವ ರೇಣುಕಾ ಶಾಂತಮಯ ಶಿವಾಚಾರ್ಯ ಮಹಾಸ್ವಾಮಿಗಳು ನೀಲಗಲ್ ಗಣೇಕಲ್ ಪೂಜ್ಯರು ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸದರಾದ ರಾಜಾ ಅಮರೇಶ ನಾಯಕ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ ಎನ್ಎಸ್ ಬೋಸರಾಜ ಮಾಜಿ ಶಾಸಕರಾದ ಹಂಪಯ್ಯ ನಾಯಕ ಬಸನಗೌಡ ಬ್ಯಾಗವಾಟ ಗಂಗಾಧರ ನಾಯಕ ಮಾಜಿ ಸಂಸದರಾದ ಬಿ ವಿ ನಾಯಕ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ ಪಾಟೀಲ ಅತ್ತನೂರು ಹಾಗೂ ಎಮ್ ಈರಣ್ಣ ಮೈಕೋ ಕನ್ಸ್ಟ್ರಕ್ಷನ್ ಅಧ್ಯಕ್ಷರು ಶರಣಪ್ಪ ನಾಯಕ ಗುಡದಿನ್ನಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ರಾಜಕೀಯ ನೇತಾರರು ಪಾಲ್ಗೊಳ್ಳುವರು.

ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಹಾಸ್ಯ ಟೆನ್ನಿಸ್ ಕೃಷ್ಣ ಅವರ ನೇತೃತ್ವದಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದ್ದು,ಕಲಾವಿದರಾದ ಮಹಾಂತೇಶ ಹುಲ್ಲೂರು ಆಕಾಶವಾಣಿ ಕಲಾವಿದರು, ದೇವರಾಜ ಯಲಿ ಗಬ್ಬೂರು ಮಲ್ಲಿಕಾರ್ಜುನ ಬಾಗೂರು ನಾಗರಾಜ ಅತ್ತನೂರು ಶಹಪುರ ಶಂಕರಗೌಡ ಸಿರವಾರ ಹುಸೇನ್ ಬಾಷಾ ಲಿಂಗಸೂಗೂರು ಅಮರೇಶ ಹೂಗಾರ ಬ್ಯಾಗವಾಟ್ ಸುರೇಶ್ ಹೂಗಾರ್ ಮಾರ್ಕoದಿನ್ನಿ ಸೇರಿದಂತೆ ಹಿರಿಯ ಕಲಾವಿದರು ಪಾಲ್ಕೊಳ್ಳುವರು ಎಂದು ತಿಳಿಸಿದರು.