ಹಿರಿಯ ಮುತ್ಸದ್ದಿ ಗುರುವಿನ ಮೂಕಯ್ಯ ತಾತ ಇನ್ನಿಲ್ಲ


ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗುರುವಿನ ಮನೆತನದ ಹಿರಿಯ ಮುತ್ಸದ್ದಿ ಮೂಕಯ್ಯ ತಾತ ಗುರುವಿನ(80) ಇಂದು ನಿಧಾನರಾದರು. ಮುತ್ಸದ್ದಿ ನಾಯಕ ಹಾಲುಮತ ಸಮಾಜದ ಕುಲ ಗುರುಗಳು ನೇರ ನುಡಿಯಿಂದಲೇ ಹೆಸರು ಗಳಿಸಿದಾತ ಗುರುಮನೆತನದ ಧೀಮಂತ ವ್ಯಕ್ತಿ, ಗುರುವಿನ ಮೂಕಯ್ಯ ತಾತನವರು ರಾಯಚೂರು ಜಿಲ್ಲೆಯು ಕಂಡಂತಹ ಅಪ್ರತಿಮ ವ್ಯಕ್ತಿ. ಇಬ್ಬರು ಪತ್ನಿಯರು ಆರು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದು ನಾಳೆ ಸಾಯಂಕಾಲ 3 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಗುರುವಿನ ಮನೆತನದವರು ತಿಳಿಸಿದರು.

ಶ್ರೀ ಬೂದಿ ಬಸವೇಶ್ವರ ಮಠದ ಪೂಜ್ಯರು,ಸ್ಥಳೀಯ ಮಾಜಿ ಸಚಿವರಾದ ಶಿವನಗೌಡ ನಾಯಕ,ಸಂಸದರಾದ ಅಮರೇಶ ನಾಯಕ,ಮಾಜಿ ಸಂಸದರಾದ ಬಿವಿ ನಾಯಕ,ಜೆಡಿಎಸ್ ಪಕ್ಷದ ಕಲ್ಯಾಣ ಕರ್ನಾಟಕದ ವೀಕ್ಷಕರಾದ ಶ್ರೀಮತಿ ಕರೆಮ್ಮ, ಚಿಕ್ಕಮಠದವರು, ಶ್ರೀನಿವಾಸ ದೇಸಾಯಿ ಹುಟ್ಟಿ ಚಿನ್ನದ ಗಣಿ ರಾಜ್ಯ ನಿರ್ದೇಶಕರು ನಿಂಗಪ್ಪ ಕರ್ಲೆ ಮದರಕಲ್, ಕಾಂಗ್ರೆಸ್ ಪಕ್ಷದ ಅಯ್ಯಪ್ಪ  ಮಂಜುನಾಥ ಗಬ್ಬೂರು ಚಿದಾನಂದ ಖಾನಾಪುರ  ಸಂತಾಪ ವ್ಯಕ್ತಪಡಿಸಿದ್ದಾರೆ