ಕನಕದಾಸರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ : ಬಿ.ಎಮ್. ಪಾಟೀಲ್

ಬಳ್ಳಾರಿ : 15ನೇ ಶತಮಾನದಲ್ಲಿ ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ತಮ್ಮ ಕೀರ್ತನೆಗಳ ಮೂಲಕ ಸಂದೇಶ ಸಾರಿದ ಮಹಾನ ಭಕ್ತರು ಕನಕದಾಸರು. ಅಂತಹ ಮಹಾನ ಸಂತರ ತತ್ವಾದರ್ಷಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ರಾಜ್ಯ ಕಾಂಗ್ರೆಸ್ ವಕ್ತಾರರು  ಹಾಗೂ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ.ಎಮ್  ಪಾಟೀಲರು ಹೇಳಿದರು.

   ನಗರದ ಕನಕದಾಸ ಪುತ್ತಳಿಗೆ ಪೂಜೆ ಸಲ್ಲಿಸುವ ಮುಖಾಂತರ ಬಿಡಿಎ ಮೈದಾನದಲ್ಲಿ ಭಕ್ತ ಕನಕದಾಸರ ದಿನಾಚರಣೆಯನ್ನು ಉದ್ದೇಶಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣ, 15 ಶತಮಾನದಲ್ಲಿ ಕನಕದಾಸರು, ನಂತರ ಡಾ. ಬಿ ಆರ್ ಅಂಬೇಡ್ಕರ್ ಅವರು ಸಮ ಸಮಾಜಕ್ಕಾಗಿ ದುಡಿದವರು. ಇಂತಹ ದಾರ್ಶನಿಕರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು

      ಸ್ಥಳೀಯ ಶಾಸಕರಾದ ಸೋಮಶೇಖರ್ ರೆಡ್ಡಿ ಅಪರ ಜಿಲ್ಲಾಧಿಕಾರಿಗಳಾದ ಮಂಜುನಾಥ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಲಿಂಗಮೂರ್ತಿ, ತಹಶೀಲ್ದಾರರಾದ ವಿಶ್ವನಾಥ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author