ಸಹರಾ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಕಲಿಕಾ ವಸ್ತು ಪ್ರದರ್ಶನ

ಶಹಪುರ : ತಾಲೂಕಿನ ಸಹರಾ ಕಾಲೋನಿಯಲ್ಲಿರುವ ಸಹರಾ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 14ರ ಮಕ್ಕಳ ದಿನಾಚರಣೆ ನಿಮಿತ್ತ ಕಲಿಕಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸಹರ ಪಬ್ಲಿಕ್ ಸಂಸ್ಥೆಯ ಅಧ್ಯಕ್ಷರಾದ ನಾಸಿರುದ್ದೀನ್ ಲಲ್ಲೋಟಿಯವರು ತಿಳಿಸಿದರು

     ಶಿಶುವಿಹಾರದಿಂದ ಐದನೇ ತರಗತಿಯ ಮಕ್ಕಳಿಗೆ ವಸ್ತು ಪ್ರದರ್ಶನ ನಡೆಸಲಾಗಿದ್ದು, ವಿಜೇತರ ಆಯ್ಕೆಯನ್ನು ಪೋಷಕರಿಗೆ ಬಿಡಲಾಗಿದೆ. ಶಾಲಾ ಮಕ್ಕಳ ವಸ್ತುಗಳನ್ನು ಪೋಷಕರು ವೀಕ್ಷಿಸಿ ಮಕ್ಕಳಿಂದ ವಿಶ್ಲೇಷಣೆ ಪಡೆದು ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನಕ್ಕಾಗಿ ಆಯ್ಕೆ ಮಾಡುತ್ತಾರೆ. ಜೊತೆಗೆ ಶಿಕ್ಷಕರ ಪಾತ್ರವಿದ್ದು, ಅಂತಿಮವಾಗಿ ವಿಜೇತ ಮಕ್ಕಳಿಗೆ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಪ್ರತಿ ತರಗತಿವಾರು ಪ್ರಥಮ ದ್ವಿತೀಯ ತೃತೀಯ ಬಹುಮಾನವನ್ನು ವಿತರಿಸಲಾಗುವುದು ಎಂದರು.

 

About The Author