ಹಯ್ಯಾಳ ಬಿ ಗ್ರಾಮದಲ್ಲಿ ಕನಕದಾಸ ಜಯಂತಿ

ಶಹಾಪೂರ: ವಡಗೇರಾ ತಾಲೂಕಿನ ಹಯ್ಯಳ ಬಿ ಗ್ರಾಮದಲ್ಲಿ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಮತ್ತು ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ ಪೂಜಾರಿ ಮಾತನಾಡುತ್ತಾ, ದಾಸರು ಮತ್ತು ಶರಣರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರ.15 ನೇ ಶತಮಾನದಲ್ಲಿ ಕನಕದಾಸರು ಜಾತಿ-ಧರ್ಮದ ವಿರುಧ್ಧ ತನ್ನ ಕೀರ್ತನೆಗಳ ಮೂಲಕ ಸಾರಿದರು.ಅಂತಹ ಮಹಾತ್ಮರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

   ಅನ್ನದಾನವನ್ನು ಮಾಡಲಾಗಿತ್ತು., ಗ್ರಾ.ಪಂ.ಸದಸ್ಯರಾದ ಕಾಮಣ್ಣ,ಮುಖೇಶ,ಸುರೇಶ ಮಾಳು,ಭೀಮಾಶಂಕರ ಹಾಗೂ ಸಂಘದ ಪದಾಧಿಕಾರಿಗಳು,ಊರಿನ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *