ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಕರೇಗಾರ

ಬೆಂಗಳೂರು : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಕರೇಗಾರ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಎಂದು ರಾಜ್ಯ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ.ಎಮ್.ಪಾಟೀಲ ರವರು ಪ್ರಕಟಣೆಯಲ್ಲಿ ತಿಳಿಸಿದರು.

ಸಂಘದ ನೀತಿ ನಿಯಮಗಳಿಗೆ ಬದ್ಧರಾಗಿದ್ದು,ರಾಜ್ಯಾಧ್ಯಕ್ಷರಿಗೆ ಸಹಕಾರ ನೀಡುವ ಮೂಲಕ ಸಂಘದ ಹೇಳಿಗೆಗೆ ಶ್ರೇಯೋಭಿವೃದ್ಧಿಗೆ ತನು ಮನದಿಂದ ಸಹಕರಿಸುವಂತೆ ಬದ್ಧರಾಗಿರಬೇಕೆಂದು ಹಾಗೂ ಸಂಘದ ಪರ ಹೋರಾಟಕ್ಕೆ ತಮ್ಮನ್ನು ತಾವು ತೊಡಗಿಕೊಳ್ಳಬೇಕೆಂದು ತಿಳಿಸಿದರು.ಇನ್ನು ಮುಂದೆ ತಾಲೂಕು ಜಿಲ್ಲೆ ಗ್ರಾಮ ಘಟಕಗಳಲ್ಲಿ ಯುವ ಘಟಕಗಳನ್ನು ರಚಿಸುವ ಅಧಿಕಾರ ನೀಡುವ ಮೂಲಕ ರಾಜ್ಯಾಧ್ಯಕ್ಷರಿಗೆ ಸಹಕರಿಸಬೇಕೆಂದು ಸೂಚಿಸಿದರು.