ಶಹಾಪುರ ಕನಕ ನಗರದಲ್ಲಿ ಕನಕದಾಸರ ಜಯಂತಿ 

ಶಹಾಪುರ : ದಾಸ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ನಿಮಿತ್ಯ ಕನಕ ನಗರ ಬಡಾವಣೆಯ ಕುರುಬ ಸಮಾಜದ ಮುಖಂಡರು ಹಾಲಬಾವಿ ರಸ್ತೆಯಲ್ಲಿರುವ ಕನಕದಾಸರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಹಿರಿಯ ವಕೀಲರಾದ ಆರ್. ಚೆನ್ನಬಸ್ಸು ವನದುರ್ಗ ಮಾತನಾಡುತ್ತಾ, ಕನಕದಾಸರ ಜೀವನ ನಮ್ಮೆಲ್ಲರಿಗೂ ಸರ್ವಕಾಲಕ್ಕೂ ಸ್ಫೂರ್ತಿ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ಕನಕದಾಸರ ವಿಚಾರದಾರೆಗಳನ್ನು ಹಂಚಿಕೊಂಡರು.

   ಕುರುಬ ಸಮಾಜದ ತಾಲೂಕು ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಕನಕದಾಸರ ಜೀವನ ಕುರಿತು ಮಾತನಾಡಿದರು.

     ಈ ಸಂದರ್ಭದಲ್ಲಿ ಸೋಮಶೇಖರ ಹಿರೇಮಠ, ಬಸವರಾಜ ವಿಭೂತಿಹಳ್ಳಿ, ವಿಠ್ಠಲ್ ವಗ್ಗಿ, ಗಿರೆಪ್ಪಗೌಡ ಬಾಣತಿಹಾಳ, ಮಲ್ಲಪ್ಪ ಪೂಜಾರಿ ಮಲ್ಲಿಕಾರ್ಜುನ ಕಂದಕೂರ್, ಹೈಯಾಳಪ್ಪ ಸುರಪುರ, ನಿಂಗಣ್ಣ ಸಗರ್, ರೇವಣಸಿದ್ದಪ್ಪ, ಸೋಮರಾಯ್ ರಾಜಾಪುರ, ನಿಂಗಣ್ಣ ಹಬ್ಬಳ್ಳಿ, ಅಣ್ಣವಿರಯ್ಯ ಸ್ವಾಮಿ, ದೇವೀಂದ್ರಪ್ಪ ನಾಶಿ, ಮಲ್ಲಣ್ಣಗೌಡ ಕ್ಯಾತ್ನಾಳ್, ಅಶೋಕ್ ದಿನ್ನಿ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು, ಯುವಕರು ಇದ್ದರು.

Leave a Reply

Your email address will not be published. Required fields are marked *