ಕನಕದಾಸರ ಜಯಂತಿ ವಿಜ್ರಂಭಣೆಯಿಂದ ಆಚರಿಸಲು ನಿರ್ಧಾರ : ಡಾ.ಭೀಮಣ್ಣ ಮೇಟಿ

ಶಹಾಪುರ : ಭಕ್ತ ಕನಕದಾಸರ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷರಾದ ಡಾ.ಭೀಮಣ್ಣ ಮೇಟಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಕನಕ ಜಯಂತ್ಯೋತ್ಸವ ನಿಮಿತ್ಯ  ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಕೋವೀಡ್ ನಿಂದಾಗಿ ಕಳೆದ ಮೂರು ವರ್ಷಗಳಿಂದ ಜಯಂತಿ ಆಚರಿಸಿರಲಿಲ್ಲ.
     ಕರ್ನಾಟಕ ಪ್ರದೇಶ ಕುರುಬರ ಸಂಘ,ಕನಕ ನೌಕರರ ಸಂಘ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವಕ ಸಂಘ, ರಾಯಣ್ಣ ಯುವ ಪಡೆ, ಕನಕ ಯುವ ಸೇನೆ ಸಂಯುಕ್ತಾಶ್ರಯದಲ್ಲಿ ದಿನಾಂಕ ೧೧ ರಂದು ಕನಕದಾಸರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ಅಂದಿನ ದಿನ ಸಿ.ಬಿ ಕಮಾನ್ ದಿಂದ ಬಸವೇಶ್ವರ ವೃತ್ತದ ಮೂಲಕ ಸಿ.ಪಿ.ಎಸ್ ಶಾಲಾ ಆವರಣದ ವರೆಗೆ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣರ ಭಾವಚಿತ್ರ ಮೆರವಣಿಗೆ ನಡೆಯಲಿದೆ.
      ಸಿಪಿಎಸ್ ಶಾಲಾ ಮೈದಾನದಲ್ಲಿ ಬಹಿರಂಗ ಸಭೆ ಜರುಗಲಿದ್ದು, ಕನಕ ಗುರುಪೀಠ ಕಲ್ಬುರ್ಗಿ ವಿಬಾಗ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಮಹಾಸಂಸ್ಥಾನದ  ಪೂಜ್ಯ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ, ಹುಲಿಜಂತಿಯ  ಪೂಜ್ಯ ಶ್ರೀ ಮಾಳಿಂಗರಾಯ ಮಹಾರಾಜರು, ಅಗತೀರ್ಥ ಸರೂರು ಹಾಲುಮತ ಗುರುಪೀಠದ  ಪೂಜ್ಯ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು, ಹೈಯಾಳಲಿಂಗೇಶ್ವರ ದೇವಸ್ಥಾನ ಆಚರ್ಕರು, ಸಕ್ರೆಪ್ಪ ಪೂಜಾರಿ, ರೇವಣಸಿದ್ದಪ್ಪಗೌಡ ಮಾಲಿ ಪಾಟೀಲ್ ಗುರುವಿನ  ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ.
      ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಕಾರ್ಯಕ್ರಮದಲ್ಲಿ ಗಣ್ಯರು, ಹಿರಿಯರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಗ್ರಾಮೀಣ ಭಾಗದವರು ಆಯಾ ಗ್ರಾಮಗಳಲ್ಲಿ ಬೆಳಗ್ಗೆ ೧೦ ಗಂಟೆಯಯೊಳಗೆ ಮನೆಗಳಲ್ಲಿ, ಗ್ರಾಮಗಳಲ್ಲಿ ಆಚರಿಸಿ ನಂತರ ನಗರದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಸಮಾಜ ಭಾಂಧವರು, ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
   ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಬಸವರಾಜ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ, ಮಲ್ಲಿಕಾರ್ಜುನ ಕಂದಕೂರ, ಶರಬಣ್ಣ ರಸ್ತಾಪೂರ, ಶಾಂತಗೌಡ ನಾಗನಟಗಿ, ದೇವಿಂದ್ರಪ್ಪ ನಾಶಿ, ಭೀಮಣ್ಣಗೌಡ ದರಿಯಾಪುರ, ಶರಣಗೌಡ ವಿಭೂತಿಹಳ್ಳಿ, ರವಿ ರಾಜಾಪೂರ, ರಾಯಪ್ಪ ಚಲುವಾದಿ, ಶರಣಪ್ಪ ಸೈದಾಪೂರ, ಸುನೀಲ ಕಂದಕೂರ, ಬಲಭೀಮ ಮಡ್ನಾಳ, ಮುನಿಯಪ್ಪಗೌಡ ನಾಗನಟಗಿ, ನಿಂಗಪ್ಪ ಕೊಡಮನಹಳ್ಳಿ, ಈಶ್ವರಾಜ ಮಾಲಿ ಪಾಟೀಲ್, ಮಾನಪ್ಪ ಗಂಗನಾಳ,  ಶರಣಗೌಡ ಬಿರಾದಾರ, ಮಾನಪ್ಪ ಅರಿಕೇರಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.

About The Author