ಮುಕ್ಕಣ್ಣ ಕರಿಗಾರ ಅವರ ಜನ್ಮದಿನ; ಕೃತಿ ಲೋಕಾರ್ಪಣೆ

ಗಬ್ಬೂರು :ನ. 07.ನವೆಂಬರ್ 08 ರ ಗೌರಿಹುಣ್ಣಿಮೆಯಂದು ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ 53 ನೇ ಹುಟ್ಟುಹಬ್ಬ ಲೋಕಕಲ್ಯಾಣ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ.ಈ ಪ್ರಯುಕ್ತ ಮುಕ್ಕಣ್ಣ ಕರಿಗಾರ ಅವರ ಮೂರನೇ ಕಣ್ಣಿನಿಂದ ಕಂಡ ಜಗತ್ತು ಎನ್ನುವ ವೈಚಾರಿಕ ಲೇಖನಗಳ ಸಂಕಲನವು ಲೋಕಾರ್ಪಣೆಗೊಳ್ಳಲಿದೆ.

ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಭಾಭವನದಲ್ಲಿ ಬೆಳಿಗ್ಗೆ 11.೦೦ ಘಂಟೆಗೆ ನಡೆಯಲಿರುವ ಸಮಾರಂಭದ ಸಾನ್ನಿಧ್ಯ ಮತ್ತುಅಧ್ಯಕ್ಷತೆಯನ್ನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ವಹಿಸಿಕೊಂಡರೆ  ಮೂರನೇ ಕಣ್ಣಿನಿಂದ ಕಂಡ ಜಗತ್ತು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ ದೇವರಗುಡ್ಡ- ಹತ್ತಿಗೂಡೂರು ತಪೋವನ ಮಠದ ಪೀಠಾಧಿಪತಿಗಳಾದ ಪೂಜ್ಯ ಗಿರಿಮಲ್ಲದೇವರು ಸ್ವಾಮಿಗಳವರು.ಸುಲ್ತಾನಪುರದ ಗಂಗಾಧರ ಶಾಂತಾಶ್ರಮದ ಶರಣರಾದ ಶರಣಪ್ಪನವರು ಉಪಸ್ಥಿತರಿರುವ ಸಮಾರಂಭದಲ್ಲಿ ಕೃತಿ ಪರಿಚಯ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವ ಲಿಂಗಸೂಗರಿನ ಸಾಹಿತಿ ಡಾ. ಎನ್ ಹೆಚ್ ಪೂಜಾರ್.ಕಾರ್ಯಕ್ರಮದಲ್ಲಿ ಶಹಾಪುರದ ಸಾಹಿತಿಗಳಾದ ಬಸವರಾಜ ಸಿನ್ನೂರ, ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಭೋಗಾವತಿ ಮತ್ತು ಎಸ್ ಆರ್ ಎಸ್ ವಿ ಕಾಲೇಜಿನ ಪ್ರಾಂಶುಪಾಲರಾದ ಈರಣ್ಣ ಮರ್ಲಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಷಣ್ಮುಖ ಹೂಗಾರ ಮತ್ತು ಬಸವಲಿಂಗ ಕರಿಗಾರ ಸ್ವಾಗತ ಮತ್ತು ಕಾರ್ಯಕ್ರಮ ನಿರ್ವಹಣೆ ಮಾಡಿದರೆ ಗುರುಬಸವ ಹುರುಕಡ್ಲಿ ಮತ್ತು ತಂಡದವರು ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸುವರು.ಕಾರ್ಯಕ್ರಮವನ್ನು ಆಯೋಜಿಸಿರುವ ಮುಕ್ಕಣ್ಣ ಕರಿಗಾರ ಅವರ ಶಿಷ್ಯರು ಮತ್ತು ಅಭಿಮಾನಿಗಳ ಬಳಗವು ಎಲ್ಲರನ್ನೂ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

About The Author