ರಾಯಚೂರು ಜಿಲ್ಲಾಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ ನೇಮಕ

ರಾಯಚೂರು : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಯಚೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ ರವರನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾದ್ಯಕ್ಷರಾದ ಬಿ.ಎಮ್. ಪಾಟೀಲ್ ರವರು ಪ್ರಕಟಣೆಯಲ್ಲಿ ತಿಳಿಸಿದರು.

ಸಂಘದ ನೀತಿ ನಿಯಮಗಳಿಗೆ ಬದ್ಧರಾಗಿದ್ದು,ರಾಜ್ಯಾಧ್ಯಕ್ಷರಿಗೆ ಸಹಕಾರ ನೀಡುವ ಮೂಲಕ ಸಂಘದ ಹೇಳಿಗೆಗೆ ಶ್ರೇಯೋಭಿವೃದ್ಧಿಗೆ ತನು ಮನದಿಂದ ಸಹಕರಿಸುವಂತೆ ಬದ್ಧರಾಗಿರಬೇಕೆಂದು ಹಾಗೂ ಸಂಘದ ಪರ ಹೋರಾಟಕ್ಕೆ ತಮ್ಮನ್ನು ತಾವು ತೊಡಗಿಕೊಳ್ಳಬೇಕೆಂದು ತಿಳಿಸಿದರು. ಇನ್ನು ಮುಂದೆ ತಾಲೂಕು ಜಿಲ್ಲೆ ಗ್ರಾಮ ಘಟಕಗಳಲ್ಲಿ ಯುವ ಘಟಕಗಳನ್ನು ರಚಿಸುವ ಅಧಿಕಾರ ನೀಡುವ ಮೂಲಕ ರಾಜ್ಯಾಧ್ಯಕ್ಷರಿಗೆ ಸಹಕರಿಸಬೇಕೆಂದು ಸೂಚಿಸಿದರು.