ನಗರಸಭೆ ಅಧ್ಯಕ್ಷರ ವಾರ್ಡ್ ನಲ್ಲಿ ಡ್ರೈನೇಜ್ ಸಮಸ್ಯೆ : ಶಾಸಕರು ಗಮನಹರಿಸಬೇಕಿದೆ

ಶಹಾಪೂರ : ಶಹಾಪುರ ನಗರಸಭೆ ಅಧ್ಯಕ್ಷರ ವಾರ್ಡ್ ನಂ. 21ರಲ್ಲಿ ಡ್ರೈನೇಜಗಳಿಲ್ವದೆ ಮನೆ ಮುಂದೆ ಬಳಕೆಯಾದ ನೀರು ಸಂಗ್ರಹವಾಗುತ್ತಿದ್ದು,ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರಸಭೆಯ ಅಧ್ಯಕ್ಷರು ಇತ್ತ ಕಡೆ ಗಮನಹರಿಸಬೇಕಿದೆ.

ಸಿ.ಸಿ.ರಸ್ತೆಯ ಬದಿ ಡ್ರೈನೇಜ್ ಇಲ್ಲದೆ ಬೇರೆಯವರ ಪ್ಲಾಟ್ ನಲ್ಲಿ ಬಳಕೆ ನೀರು ಬಿಡುತ್ತಿರುವುದು.

ರಾಕಂಗೇರೆಯ ಸುಬೇದಾರ್ ಮಲ್ಟಿ ಸ್ಪೇಷಾಲಿಸ್ಟ್ ಆಸ್ಪತ್ರೆಯ ಹಿಂದುಗಡೆಯ ಲೇಔಟ್ ನಲ್ಲಿರುವ ಸಿಸಿ ರಸ್ತೆಗಳಿಗೆ ಡ್ರೈನೇಜ್ ನಿರ್ಮಿಸದೆ ಇರುವ ಕಾರಣ ಮನೆಗಳಲ್ಲಿ ಬಳಕೆಯಾದ ನೀರನ್ನು ಬೇರೆಯವರ ಪ್ಲಾಟ್ ಗಳಿಗೆ ಬಿಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನೊಂದ ಜನರು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಎನ್ನುತ್ತಿಲ್ಲ. ಸ್ಥಳೀಯ ಶಾಸಕರು ಇತ್ತಕಡೆ ಗಮನಹರಿಸಬೇಕಿದೆ.

ಮುಳ್ಳಿನ ಕಂಟಿಗಳನ್ನು ಜೆಸಿಬಿ ಯಂತ್ರದಿಂದ ಅಲ್ಲಿರುವ ಜನರೆ ಸ್ವಚ್ಚಗೊಳಿಸುತ್ತಿರುವುದು

ಕೆಲವು ಜನರ ಆಕ್ಷೇಪಣೆಯಿಂದ ಕೆಲವು ಕಡೆ ಸಿಸಿ ರಸ್ತೆ ನಿರ್ಮಿಸದೆ ಕಂಕರ್ ಗಳನ್ನು ಹಾಕಿ ಬಿಡಲಾಗಿದೆ. ಸಿ.ಸಿ ರಸ್ತೆಯ ಬದಿಗಳಲ್ಲಿ ಮುಳ್ಳಿನ ಗಿಡ ಗಂಟೆಗಳು ಬೆಳೆದಿದ್ದು, ಸಾರ್ವಜನಿಕರು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ.ಸಿ.ಸಿ. ರಸ್ತೆಯ ಬದಿ ಡ್ರೈನೇಜ್ ನಿರ್ಮಾಣ ಮಾಡದಿದ್ದರೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಬಹುದು.

ಸಿ.ಸಿ.ರಸ್ತೆ ಕಾಮಗಾರಿ ಮಾಡದೆ ಕಂಕರಗಳನ್ನಾಕಿ ಬಿಡಲಾಗಿದೆ.

ಶಾಸಕರು ಗಮನಹರಿಸಬೇಕು

ಶಾಸಕರು ವಾರ್ಡ್ ನಂಬರ್ 21ರ ಕಡೆ ಗಮನಹರಿಸಬೇಕು.ಸಿ.ಸಿ ರಸ್ತೆಯ ಬದಿಯಲ್ಲಿನ ರಸ್ತೆಯಲ್ಲಿ ಬೆಳೆದ ಮುಳ್ಳಿನ ಗಿಡಗಳನ್ನು ಮನೆಯವರು ತಾವೆ ಸ್ವಚ್ಛ ಮಾಡಿಕೊಂಡಿದ್ದಾರೆ.ತಾವು ನಗರಸಭೆ ಅಧ್ಯಕ್ಷರ ಗಮನಕ್ಕೆ ತಂದು ವಾರ್ಡ್ ನಂಬರ್ 21ರಲ್ಲಿನ ಡ್ರೈನೇಜ್ ಸಮಸ್ಯೆಯನ್ನು ಪರಿಹರಿಸಬೇಕಿದೆ.

ನಗರಸಭೆಯ ಅಧಿಕಾರಿಗಳಿಗೆ, ಸದಸ್ಯರಿಗೆ ಹಲವಾರು ಬಾರಿ ಗಮನಕ್ಕೆ ತರಲಾಗಿದೆ.ಮನೆ ಮುಂದೆಯೇ ಬಳಕೆ ನೀರು ಹರಿಯುತ್ತಿದ್ದರೂ ಹಾಗೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಶಾಸಕರು ಇದರ ಬಗ್ಗೆ ಗಮನಹರಿಸಬೇಕಿದೆ.ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

” ಸಿದ್ದಯ್ಯ ಸ್ವಾಮಿ ಹಿರೇಮಠ
ಸದಸ್ಯರು ನಗರ ಯೋಜನಾ ಪ್ರಾಧಿಕಾರ

ನಮ್ಮ ವಾರ್ಡಿನಲ್ಲಿರುವ ಮನೆಗಳು ನಿಂತ ನೀರಿನಿಂದ ಗೋಡೆಗಳು ಬಿರುಕು ಬಿಟ್ಟಿವೆ.ಡ್ರೈನೇಜ್ ಗಳಿಲ್ಲದೆ ಸಿಸಿ ರಸ್ತೆ ನಿರ್ಮಿಸಿದ್ದೆ ಅವೈಜ್ಞಾನಿಕ. ನಗರಸಭೆಯಲ್ಲಿ ನಮ್ಮ ವಾರ್ಡ್ಗೆ ಯಾವುದೇ ಅನುದಾನವಿಲ್ಲವೆಂದು ಹೇಳುತ್ತಿದ್ದಾರೆ.ಹಾಗಾದರೆ ನಮ್ಮ ಲೇಔಟ್ ನಗರಸಭೆಯಲ್ಲಿ ಬರುವುದಿಲ್ಲವೇ ? ಸಿ.ಸಿ. ರಸ್ತೆಯಲ್ಲಿ ಕಂಕರ್ ಗಳನ್ನು ಹಾಕಿ ಹಾಗೆ ಬಿಡಲಾಗಿದೆ.ಶಾಸಕರು ಕೂಡ ನಮ್ಮ ವಾರ್ಡ ಕಡೆ ಗಮನ ಹರಿಸುತ್ತಿಲ್ಲ.

” ಮಲ್ಲಣ್ಣ ನಾಲ್ವಡಗಿ ವಾರ್ಡ್ ನಂ. 21ರ ನಿವಾಸಿ “

About The Author