ಪವಿತ್ರಾಳ ಹತ್ಯೆ : ಸಂಘಟನೆಗಳಿಂದ ಪ್ರತಭಟನೆ : ಗಲ್ಲಿಗೇರಿಸುವಂತೆ ಆಗ್ರಹ

ಶಹಪೂರ : ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ 14 ವರ್ಷದ ಬಾಲಕಿ ಪವಿತ್ರ ಎಂಬ ಅಪ್ರಾಪ್ತಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದನ್ನು ಖಂಡಿಸಿ, ಶಹಪೂರ ತಾಲೂಕು ಕುರುಬ ಸಮಾಜ,ರಾಯಣ್ಣ ಯುವ ಪಡೆ ಮತ್ತು ಇತರ ಕಾರ್ಮಿಕ ಸಂಘಟನೆಗಳು ಕೊಲೆ ಆರೋಪಿಗೆ ಗಲ್ಲಿಗೇರಿಸುವಂತೆ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮಾನವಿ ಮಾಡಿದರು.

ತಾಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶರಬಣ್ಣ ರಸ್ತಪೂರ ಮಾತನಾಡುತ್ತಾ, ಬಾಲಕಿ ಬಹಿರ್ದೆಸೆಗೆ ಹೋದಾಗ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗಟ್ಟಿದ್ದು, ಕೂಡಲೇ ಗೃಹ ಮಂತ್ರಿಗಳು ರಾಜೀನಾಮೆ ನೀಡಬೇಕು. ಬಾಲಕಿಗೆ ಪರಿಹಾರ ಧನವನ್ನು ಒದಗಿಸಬೇಕು. ಆರೋಪಿಗಳನ್ನು ಬಂಧಿಸಿದರೆ ಸಾಲದು, ಜಾಮೀನಿನ ಮೇಲೆ ಪುನಃ ಬಿಡುಗಡೆ ಹೊಂದುತ್ತಾರೆ. ಆರೋಪಿಗೆ ಗಲ್ಲಿಗೇರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಂತಗೌಡ ನಾಗನಟಗಿ ರಾಜ್ಯ ಕುರಿ ಮಹಾಮಂಡಳಿ ನಿರ್ದೇಶಕರು, ರಾಯಪ್ಪ ಚೆಲುವಾದಿ ರಾಯಣ್ಣ ಯುವ ಪಡೆಯ ತಾಲೂಕು ಅಧ್ಯಕ್ಷರು, ಮೌನೇಶ ಪೂಜಾರಿ ಹಯ್ಯಳ ಬಿ, ಮಾಳಪ್ಪ ವಿಭೂತಿ ಹಳ್ಳಿ ತಾಲೂಕು ಕಾರ್ಮಿಕ ಸಂಘಟನೆ ಅಧ್ಯಕ್ಷರು,ಕಾಮಣ್ಣ ಹಯ್ಯಳ ಬಿ, ದೇವು ಬೀ ಗುಡಿ ಸಾಯಿಬಣ್ಣ ನಾಸಿ, ಬಲಭೀಮ ಮಡ್ನಾಳ,ಮಹೇಶ ರಸ್ತಾಪುರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *