ಕುರುಬ ಪದ ಗೊಂಡ ಜೇನು ಕುರುಬ ಪದಕ್ಕೆ ಸಮ ಎಂದು ಘೋಷಿಸಲು ಸರ್ಕಾರಕ್ಕೆ ತಾಕೀತು : ಧರಣಿ ಸತ್ಯಾಗ್ರಹ

ಶಹಾಪೂರ : ಕಲಬುರ್ಗಿ ಯಾದಗಿರಿ ಬೀದರ್ ಜಿಲ್ಲೆಯಲ್ಲಿರುವ ವಾಸವಿರುವ ಕುರುಬರು ಗೊಂಡ ಜೇನು ಕಾಡು ಕುರುಬರಾಗಿದ್ದು ಕುರುಬ ಎನ್ನುವ ಪದ ಗೊಂಡ ಜೇನು ಕಾಡು ಕುರುಬ ಎನ್ನುವ ಪದಕ್ಕೆ ಸಮ ಎಂದು ಸರಕಾರ ಘೋಷಿಸಿ ಪರಿಶಿಷ್ಟ ಪಂಗಡಕ್ಕೆ ಕುರುಬ ಎನ್ನುವ ಪದವೆ ಅಂತಿಮ ಎಂದು ಸರಕಾರ ಘೋಷಿಸಬೇಕು ಎಂದು  ಕನಕ ಗುರು ಪೀಠದ ಪೂಜ್ಯರಾದ ಲಿಂಗ ಬೀರದೇವರು ಕಳೆದ ಏಳು ದಿನಗಳಿಂದ  ಕಲಬುರ್ಗಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

* ಶಹಪುರ ತಾಲೂಕಿನ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ತಾಲೂಕು ಅಧ್ಯಕ್ಷರಾದ ರವಿ ರಾಜಪುರ ಸೇರಿದಂತೆ ಹಲವು ಗಣ್ಯರು      ಸ್ವಾಮೀಜಿಯವರ ಧರಣಿ ಸತ್ಯಾಗ್ರಹಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಸರ್ಕಾರ ಆದಷ್ಟು ಬೇಗ ನಮ್ಮ ಭರವಸೆಯನ್ನು ಈಡೇರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಭೀಮಣ್ಣಗೌಡ ದರಿಯಾಪುರ,  ದೇವೇಂದ್ರಪ್ಪ ಮೇಟಿ, ನಾಗು ಹಳ್ಳಳ್ಳಿ ವಕೀಲರು, ಶರಣು ಸೈದಾಪುರ, ನಾನೆಗೌಡ ಮೇಟಿ, ಅಯ್ಯನಗೌಡ ಹೊಸ್ಕೇರಾ, ಯಂಕು ಕಕ್ಕಸಗೇರ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *