ಶಿಕ್ಷಣ ಪ್ರೇಮಿ ಡಾ.ಭೀಮಣ್ಣ ಮೇಟಿಯವರು ಕಟ್ಟಿದ ಡಿಡಿಯು ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಸಮಾರಂಭ

ಶಹಾಪೂರ : ಶಹಾಪುರ ನಗರದಲ್ಲಿ ಬಡ ಮಕ್ಕಳ ಕನಸು ನನಸಾಗಲೆಂದು ಡಿಡಿಯು ಸಮೂಹ ಶಿಕ್ಷಣ ಸೇವಾ ಸಂಸ್ಥೆಯು ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಪ್ರೇಮಿ ಡಾ. ಭೀಮಣ್ಣ ಮೇಟಿಯವರು ಪ್ರಾರಂಭಿಸಿದರು. ಈ ಸಂಸ್ಥೆಯ ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಕಲಬುರ್ಗಿ, ಸೇಡಂ, ಯಾದಗಿರಿ, ವಡಗೇರ, ದೋರನಹಳ್ಳಿ, ಸೈದಾಪುರದಲ್ಲಿ ಶೈಕ್ಷಣಿಕ ಕೇಂದ್ರಗಳನ್ನು ಆರಂಭಿಸಿದೆ. ಪ್ರಸ್ತುತ ಅಕ್ಟೋಬರ 30ಕ್ಕೆ ಶಿಕ್ಷಣ ಸಂಸ್ಥೆಯು ಪ್ರಾರಂಭಿಸಿ 10 ವರ್ಷ ಪೂರೈಸಿದ್ದು, ಅದರ ನಿಮಿತ್ತ ವಡಗೇರ ಪಟ್ಟಣದ ಡಿಡಿಯು ವಿಜ್ಞಾನ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಗ್ಗೆ 10.30 ಕ್ಕೆ ದಶವಾರ್ಷಿಕ ಸಮಾರಂಭವು ಜರುಗಲಿದೆ ಎಂದು ಭೀಮಣ್ಣ ಮೇಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಡಿಡಿಯು ಪದವಿ ಪೂರ್ವ ಕಾಲೇಜ ಶಹಾಪುರ ದೋರನಹಳ್ಳಿ ತಾ.ಶಹಾಪುರ

 

      * ಕನ್ನಡ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುತ್ತಿದ್ದು, ಶಿಶು ವಿಹಾರದಿಂದ ಎಲ್ ಕೆ ಜಿ ಯು ಕೆ ಜಿ ಇಂದಿಡಿದು ಪದವಿ ಪೂರ್ವದ ವರೆಗೂ ಶಿಕ್ಷಣ ನೀಡಲಾಗುತ್ತಿದೆ ಎಂದರು. ಗ್ರಾಮೀಣ ಮತ್ತು ದೂರದ ನಗರದ ಮಕ್ಕಳಿಗೆ ಅನುಕೂಲವಾಗಲೆಂದು ಶಾಲಾ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.

ಡಿಡಿಯು CBSC ಶಾಲೆ ಶಹಾಪುರ

 

* ಕಾರ್ಯಕ್ರಮದಲ್ಲಿ ಪೂಜ್ಯರಾದ ರೇವಣಸಿದ್ಧ ಶಾಂತಮಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಶರಣಬಸಪ್ಪಗೌಡ ದರ್ಶನಾಪುರ, ಪ್ರಿಯಾಂಕ ಖರ್ಗೆ, ಬಿವಿ ನಾಯಕ, ನಿಖಿತ್ ರಾಜ ಮೌರ್ಯ. ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಹಲವಾರು ಗಣ್ಯರು , ರಾಜಕೀಯ ನೇತಾರರು ,ಶಿಕ್ಷಣ ಪ್ರೇಮಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಡಾ.ಭೀಮಣ್ಣ ಮೇಟಿ ಸಂಸ್ಥಾಪಕರು

ಡಿಡಿಯು ಸಮೂಹ ಶಿಕ್ಷಣ ಸೇವಾ ಸಂಸ್ಥೆ

 

 

About The Author