ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ : ವಸತಿ ನಿಲಯ ಕಟ್ಟಡಗಳಿಗೆ ಅನುದಾನ ಮಂಜೂರು : ದರ್ಶನಾಪುರ

ಶಹಾಪೂರ :ಬಡವರು ಮತ್ತು ಹಿಂದುಳಿದವರ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ತಾಲೂಕಿನ ಹಲವು ಕಡೆ ಸರಕಾರದ ವಸತಿ ನಿಲಯಗಳಿಗೆ ಕಟ್ಟಡವಿಲ್ಲ. ಇದನ್ನು ಪರಿಗಣಿಸಿ ಸರಕಾರದ ಮನವೊಲಿಸಿ, ಶಿಕ್ಷಣ ಮಹತ್ವದ್ದಾಗಿದ್ದು, ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲು ತಾಲೂಕಿನ ಮೂರು ಕಡೆ 30 ಕೋಟಿ ರೂಪಾಯಿ ಅನುದಾನದಲ್ಲಿ ವಸತಿ ನಿಲಯ ಕಟ್ಟಡಕ್ಕಾಗಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕರಾದ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

* ಶಾಸಕರ ಕಾರ್ಯಾಲಯದಲ್ಲಿ ಮಾತನಾಡಿದ ಅವರು ಯಾರು ಶಿಕ್ಷಣ ವಂಚಿತರಾಗಬಾರದು. ತಾಲೂಕಿನಲ್ಲಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಾಶ್ವತ ಕಟ್ಟಡಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.ನಗರದ ನೂರು ವಿದ್ಯಾರ್ಥಿಗಳ ಸಂಖ್ಯೆ ಇರುವ ಮೆಟ್ರಿಕ್  ನಂತರದ ಬಾಲಕಿಯ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ 3.26 ಕೋಟಿ ಅನುದಾನ ದೊರಕಿದೆ ಎಂದರು. ತಾಲೂಕಿನಲ್ಲಿ ಶೇ. 70 ರಷ್ಟು ಶುದ್ಧ ಕುಡಿಯುವ ನೀರಿನ ಟ್ಯಾಂಕರ್ ಘಟಕಗಳು ನಿರ್ವಹಣೆ ಮಾಡುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ  ಎಂದು ತಿಳಿಸಿದರು.

 

* 10 ಕೋಟಿ ಮಂಜೂರು : ಶಿರವಾಳ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನಿಲಯ ಕಟ್ಟಡಕ್ಕೆ.

* 10 ಕೋಟಿ ಮಂಜೂರು : ಕರಿಗುಡ್ಡದ ಉಕ್ಕಿನಾಳ  ಮೊರಾರ್ಜಿ ಶಾಲೆಯ ವಸತಿ ನಿಲಯ ಕಟ್ಟಡಕ್ಕೆ

* 10 ಕೋಟಿ ಮಂಜೂರು : ಸಗರದ ಡಾ. ಬಿ ಆರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದ ಕಟ್ಟಡಕ್ಕೆ 

* 3.26 ಕೋಟಿ ಬಿಡುಗಡೆ.100  ವಿದ್ಯಾರ್ಥಿಗಳಿರುವ ಬಾಲಕಿಯರ ವಸತಿ ನಿಲಯದ ಕಟ್ಟಡಕ್ಕೆ

 

About The Author