ಗ್ರಾಮ ಪಂಚಾಯಿತಿಯ ನಿರ್ಲಕ್ಷ : ಕಲುಸಿತ ನೀರು ಸೇವನೆ : ಮೂರು ಜನರ ಸಾವು : ಹಲವರು ಆಸ್ಪತ್ರೆಗೆ ದಾಖಲು

ಶಹಾ‌ಪುರ : ತಾಲೂಕಿನ ಹೋತಪೇಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮದ ಹಲವಾರು ಜನರು ಕಲುಷಿತ ನೀರು ಸೇವಿಸಿ ವಾಂತಿ ಭೇದಿಯಿಂದ ನರಳುತ್ತಿದ್ದು ಅದರಲ್ಲಿ ಮೂರು ಜನ ಮೃತಪಟ್ಟಿದ್ದು, ಉಳಿದವರನ್ನು ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊನ್ನಪ್ಪ(45), ಈರಮ್ಮ (92),ಸಿದ್ದಮ್ಮ(95) ಸಾವನ್ನಪ್ಪಿದ ದುರ್ದೈವಿಗಳಾಗಿದ್ದು. ಕೂಡಲೆ ಶುದ್ಧ ಕುಡಿಯುವ ನೀರನ್ನು ಒದಗಿಸದಿದ್ದರೆ ಗ್ರಾಮದಲ್ಲಿ ಕಾಲರಾ ರೋಗ ಹರಡುವ ಬೀತಿ ಇದೆ. ಈಗಾಗಲೇ ಒಬ್ಬ ವ್ಯಕ್ತಿಗೆ ಗ್ರಾಮದಲ್ಲಿ ಕಾಲರಾ ಹರಡಿದೆ ಎಂದು ಅಂದಾಜಿಸಲಾಗಿದ್ದು ಆರೋಗ್ಯ ಇಲಾಖೆಯು ಆದಷ್ಟು ಬೇಗನೆ ಇದರ ಬಗ್ಗೆ ಗಮನ ಹರಿಸಬೇಕಿದೆ.

     ಘಟನೆ ಹಿನ್ನೆಲೆ :- ಸುಮಾರು ವರ್ಷಗಳಿಂದ ಗ್ರಾಮದಲ್ಲಿರುವ ಪುರಾತನ ಬಾವಿಯಿಂದ ನೀರನ್ನು ಗ್ರಾಮಸ್ಥರು ಕುಡಿಯಲು ಬಳಸುತ್ತಿದ್ದು, ಬಾವಿಯಿಂದ ನೀರಿನ ಟ್ಯಾಂಕರ್ ಗೆ ಸರಬರಾಜು ಮಾಡಿ ಪೈಪ್ ಲೈನ್ ಮುಖಾಂತರ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಗ್ರಾಮ ಪಂಚಾಯಿತಿಯು ಒದಗಿಸುತ್ತಿತ್ತು. ತೆರೆದ ಬಾವಿಯಲ್ಲಿ ಕಸಕಡ್ಡಿಯಿಂದ ತ್ಯಾಜ್ಯ ವಸ್ತುಗಳಿಂದ ಬಾವಿಯೊಳಗೆ ಎಸೆಯಲಾಗಿದ್ದು ನೀರು ಕಲುಷಿತಗೊಂಡಿರುವುದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

* ಗ್ರಾಮಸ್ಥರ ಹಲವು ಜನರ ಪ್ರಕಾರ ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿಯಿಂದ ಪೈಪ್ ಗಳು ಹೊಡೆದಿದ್ದು ಟ್ಯಾಂಕರ್ ನಿಂದ ಬರುವ ನೀರು ಒಡೆದ ಪೈಪ್ ಮೂಲಕ ನೀರು ಕಲುಷಿತಗೊಂಡು ವಾಂತಿಭೇದಿ ಉಂಟಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

         ವೈದ್ಯರ ಭೇಟಿ :-ಗ್ರಾಮದಲ್ಲಿ ದಿಡೀರನೆ ವಾಂತಿಭೇದಿಯಾದ ಕಾರಣ ಖಾಸಗಿ ಸುಬೇದಾರ್ ಆಸ್ಪತ್ರೆಯ ವೈದ್ಯರಾದ ಡಾ. ಚಂದ್ರಶೇಖರ ಸುಬೇದಾರ ಗ್ರಾಮಕ್ಕೆ ಭೇಟಿ ನೀಡಿ  ತಮ್ಮ ಅಂಬುಲೆನ್ಸ್ ಮೂಲಕ ನಗರದ ಆಸ್ಪತ್ರೆಗಳಿಗೆ ರೋಗಿಗಳನ್ನು ರವಾನಿಸಿದರು. ಗ್ರಾಮದಲ್ಲಿನ ಬಾವಿಯನ್ನು ಪರಿಶೀಲಿಸಿ ಬಾವಿಯ ನೀರನ್ನು ತಪಾಸಣೆಗೆ ಕಳಿಸಲಾಗಿದೆ. ನಗರದ ಆರೋಗ್ಯ ಇಲಾಖೆ ವೈದ್ಯರು ಗ್ರಾಮದಲ್ಲಿ ರೋಗಿಗಳಿಗೆ ತಪಾಸಣೆ ನಡೆಸಲಾಗುತ್ತಿದೆ.

ಗ್ರಾಮ ಪಂಚಾಯಿತಿಯ ನಿರ್ಲಕ್ಷದಿಂದ ಈ ಅವಘಡ ಸಂಭವಿಸಿದೆ :ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಕೂಡ  ಕೆಟ್ಟು ನಿಂತಿದ್ದು ಪುನಃ ಪ್ರಾರಂಭಿಸಲು ಗ್ರಾಮ ಪಂಚಾಯಿತಿಯು ನಿರ್ಲಕ್ಷ ವಹಿಸಿದೆ. ಪ್ರಸ್ತುತದಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಗ್ರಾಮ ಪಂಚಾಯಿತಿಯು ವ್ಯವಸ್ಥೆ ಮಾಡಿದ್ದು, ಈ ನೀರು ಕೂಡ ಕಲುಷಿತಗೊಂಡಿದ್ದು, ಮತ್ತೆ ವಾಂತಿಭೇದಿ ಹರಡುವ ಸಂಭವವಿದೆ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಅದರಿಂದ ಕುಡಿಯುವ ನೀರನ್ನು ಒದಗಿಸಿದಿದ್ದರೆ ಹೋರಾಟ ಮಾಡಬೇಕಾಗುತ್ತದೆ.

*ಭೀಮಣ್ಣ ಶಖಾಪುರ. ತಾಲೂಕ ಅಧ್ಯಕ್ಷರು ಕರವೇ ಘಟಕ ಶಹಪುರ

About The Author