ಸರ್ಕಾರಿ ಆಸ್ಪತ್ರೆಯಲ್ಲಿನ ಜನೌಷಧಿ ಕೇಂದ್ರಕ್ಕೆ ಮುಗಿಬಿದ್ದ ಜನ !ಸರಕಾರದ ಔಷಧಿಗಳು ಖಾಲಿಯಾಗಿದೆ?

ಶಹಾಪುರ : ನಗರದ ಸರಕಾರಿ ಆಸ್ಪತ್ರೆಯಲ್ಲಿ ಓ ಪಿ ಡಿ ಚೀಟಿಗಳನ್ನು ತೆಗೆದುಕೊಳ್ಳಲು  ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಚೀಟಿಕೊಳ್ಳಲು ಎರಡಕ್ಕಿಂತಲೂ ಹೆಚ್ಚು ಕೌಂಟರ್ ಇದ್ದರೂ ಒಬ್ಬರು ಮಾತ್ರ ಓ ಪಿ ಡಿ ಚೀಟಿಗಳನ್ನು ಕೊಡುತ್ತಿರುವುದು ಕಂಡುಬಂದಿದ್ದು, ಇದರಿಂದ ನೂಕು ನುಗ್ಗಲು ಉಂಟಾಗಿದೆ. ತಾಲೂಕು ವೈದ್ಯಾಧಿಕಾರಿಗಳು ಮತ್ತು ಆಡಳಿತದ ಅಧಿಕಾರಿಗಳು ಹೋಮ್ ಗಾರ್ಡಗಳೂ ಇದರ ಬಗ್ಗೆ ಗಮನ ಹರಿಸದೆ ಇರುವುದು ಆಶ್ಚರ್ಯಕರ.

 

 

* ಸರ್ಕಾರಿ ಆಸ್ಪತ್ರೆಯ ಔಷಧಿ ಮಳಿಗೆಯಲ್ಲಿ ಔಷಧಿ ಚೀಟಿ ತೋರಿಸಿದರೆ ಕೆಲವು ಔಷಧಿಗಳನ್ನು ನೀಡಿ ಉಳಿದ ಔಷಧಿಗಳಿಗಾಗಿ ಪ್ರಧಾನ ಮಂತ್ರಿ ಜನೌಪ ಔಷಧಿಯತ್ತ ಕೈ ಮಾಡಿ ತೋರಿಸುವರು. ಸರಕಾರಿ ಆಸ್ಪತ್ರೆಯಲ್ಲಿ ಕೋಟಿಗಟ್ಟಲೆ ಔಷಧಿಗಳು ಬಂದಿದ್ದರೂ ಕೂಡ ಜನೌಪ ಔಷಧಿ ಕೇಂದ್ರದಲ್ಲಿ ಕೈ ಮಾಡಿ ತೋರಿಸುತ್ತಿರುವುದು ಬಡ ಜನರಿಗೆ ತೊಂದರೆ ಉಂಟಾಗಿದೆ.ಜೊತೆಗೆ ಆಸ್ಪತ್ರೆಯಲ್ಲಿರುವ ಸುಮಾರು 12 ಜನ ವೈಧ್ಯರು ಐಪಿಡಿ ಓಪಿಡಿ ರೋಗಿಗಳಿಗೆ ಪ್ರಧಾನ ಮಂತ್ರಿ ಜನೌಪ ಔಷಧಿಗಳನ್ನೆ ಬರೆಯುತ್ತಿದ್ದು,ಇಲ್ಲಿನ ಆಸ್ಪತ್ರೆ ಔಷಧಿ ವಿತರಣೆ ಕೇಂದ್ರದಲ್ಲಿ ಔಷಧಿಗಳು ಇಲ್ಲ ಎಂದು ಹೇಳುತ್ತಿದ್ದಾರೆ. ನೀಡುತ್ತಿರುವ ಉಚಿತ ಔಷಧಿಗಳು ಯಾವ ಕಡೆ ಸರಬರಾಜು ಆಗುತ್ತಿವೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ?

* ಸರ್ಕಾರಿ ಪ್ರತಿ ತಿಂಗಳು ಲಕ್ಷಾಂತರ ಮೌಲ್ಯದ ಔಷಧಿ ಪರಿಕರಗಳನ್ನು ಉಚಿತವಾಗಿ ನೀಡಲು ಮತ್ತು ತುರ್ತು ಪರಿಸ್ಥತಿಯಲ್ಲಿ ಔಷಧಿಗಳ ಖರೀದಿಗೆ ಅನುಧಾನ ನೀಡಿದರೂ ಇಲ್ಲಿನ ವೈಧ್ಯರು ಜನ ಔಷಧಿ ಕೆಂದ್ರಗಳಿಗೆ ಜೋತು ಬಿದ್ದಿದ್ದಾರೆ. ಇದರಿಂದ ಸರ್ಕಾರಿ ಔಷಧಿಗಳ ಗತಿ ಹೇಗೆ? ಯತ್ತ ಸಾಗುತ್ತಿದೆ ಈ ಔಷಧಿಗಳ ಪಯಣ ಎನ್ನುವದು ತರ್ಕಕ್ಕೆ ನಿಲುಕದಂತಾಗಿದೆ. ಕಾಟಾಚಾರಕ್ಕಾಗಿ ಓಪಿಡಿ ಐಪಿಡಿ ಚೀಟಿಗಳನ್ನು ಕಂಪ್ಯೂಟರೀಕರಣಗೊಳಿಸಿಕೊಂಡು ಮುಂದಿನ ಔಷಧಿಗಾಗಿ ಜನೌಷಧಿ ಕೇಂದ್ರಕ್ಕೆ ಕಳಿಸುತ್ತಾರೆ. ಈ ಅವ್ಯವಸ್ಥೆಯಿಂದ ಸರ್ಕಾರಿ ಔಷಧಿ ಉಗ್ರಾಣ ಅದೋಗಿತಿಯಾಗುತ್ತಿದೆ ಎನ್ನುವ ಮಾತು ರಿಂದ ಕೇಳಿ ಬರುತ್ತಿದೆ.

* ಅಯುಷ್ಮಾನ ರೋಗಿಗಳಿಗೂ ಈ ಜನೌಷಧಿ ಖರೀದಿ ಪ್ರತಿ ದಿನ ಸರ್ಕಾರಿ ಅಸ್ಪತ್ರೆಗೆ ನೂರಾರು ಜನ ರೋಗಿಗಳು ಬರುತ್ತಿದ್ದು, ಬಾಣಂತಿಯರು ಹೆರಿಗೆಗಾಗಿ ಬಂದು ಇಲ್ಲಿನ ಆಸ್ಪತ್ರೆಯಲ್ಲಿ ಐಪಿಡಿ ಓಪಿಡಿ ಚೀಟಿಗಳನ್ನು ಪಡೆದುಕೊಂಡು, ಹೆರಿಗೆ ಚಿಕಿತ್ಸೆಗಾಗಿ ಅಯುಷ್ಮಾನ ಭಾರತದಡಿಯಲ್ಲಿ ನೊಂದಣಿಯಾದರೂ, ಈ ಹೆರಿಗೆ ತಾಯಿ ಇಲ್ಲಿನ ಜನೌಷಧಿ ಕೆಂದ್ರದಲ್ಲಿ ಔಷಧಿಗಳನ್ನು ಇಂಜಕ್ಷನಗಳನ್ನು ಖರದೀಸಬೇಕಾದ ಅನಿವಾರ್ಯತೆ ಇಲ್ಲಿನ ಆಸ್ಪತ್ರೆಯಲ್ಲಿದೆ. ಸಂಪೂರ್ಣ ಉಚಿತ ಚಿಕಿತ್ಸೆಯಾದರೂ ಸರ್ಕಾರಿ ಅನುಧಾನದಲ್ಲಿ ಅಥವಾ ಆಯುಷ್ಮಾನ ಭಾರತದಡಿಯಲ್ಲಿ ಜನೌಷಧಿ ಕೇಂದ್ರಗಳಿಗೆ ಹಣ ನೀಡದೆ ರೋಗಿಗಳಿಂದಲೆ ಹಣ ನೀಡಿ ಔಷಧಿ ಇಂಜೆಕ್ಷನ್ ಗಳು ಖರೀದಿ ಮಾಡಬೇಕು. ಹೀಗಾಗಿ ಸರ್ಕಾರಿ ಆಯುಷ್ಮಾನ ಭಾರತ ಯೋಜನೆ ಹಳ್ಳ ಹಿಡಿದಿದೆ ಎಂದು ಜನ ಸಾಮಾನ್ಯರು ಆರೋಪ ವ್ಯಕ್ತಪಡಿಸುತ್ತಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

About The Author