ನಾಗನಟಗಿ ಗ್ರಾ.ಪಂ : ಭ್ರಷ್ಟಾಚಾರ ಆರೋಪ : ಕಡತಗಳ ಬಾಕಿ : ಫೋನ್ ಕರೆ ಸ್ವೀಕರಿಸದ ಪಿಡಿಒ ಅಣ್ಣರಾವ

ಶಹಾಪೂರ:ಗ್ರಾಮೀಣ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸ್ಥಳೀಯ ಆಡಳಿತಕ್ಕೆ ಹೆಚ್ಚು ಅಧಿಕಾರ ನೀಡಿವೆ.ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿಗೆ ಸುಪ್ರೀಂ. ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರನ್ನೊಳಗೊಂಡು  ಮಾಡಿದ ಠರಾವನ್ನು ಮುಖ್ಯಮಂತ್ರಿಗಳು ತಿರಸ್ಕರಿಸುವಂತಿಲ್ಲ. ಇಂತಹ ಅಧಿಕಾರ ಗ್ರಾಮ ಪಂಚಾಯಿತಿಗೆ ಇದೆ. ಇಂತಹ ಅಧಿಕಾರವನ್ನು ನಾಗನಟಗಿ  ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುವುದು ವಿಪರ್ಯಾಸವೇ ಸರಿ.

* ಶಹಾಪೂರ ತಾಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿ ಡಿ ಓ ಅಣ್ಣಾರಾವ್ ಇಬ್ಬರು ಕೂಡಿ ಹದಿನೈದು ಲಕ್ಷಕ್ಕೂ ಹೆಚ್ಚು  ನಕಲಿ ದಾಖಲಿ ಸೃಷ್ಟಿಸಿ ಲೂಟಿ ಮಾಡಿದ್ದಾರೆ ಎಂದು ಡಿಎಸ್ಎಸ್ ತಾಲೂಕು ಸಂಚಾಲಕರಾದ ಅರುಣ ಕುಮಾರ ದೊಡ್ಮನಿ ಆರೋಪಿಸಿದ್ದಾರೆ.

* ಸ್ವತಹ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಭೀಮನಗೌಡ ಜಿಲ್ಲಾ ಪಂಚಾಯಿತಿ ಸಿಇಓ ರವರಿಗೆ ಪತ್ರ ಬರೆದು, ನಾಗನಟಗಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಪಿಡಿಓ ಮತ್ತು ಅಧ್ಯಕ್ಷರು ಸೇರಿ ಸದಸ್ಯರ ಗಮನಕ್ಕೆ ಬಾರದೆ, ಸಭೆ ಮಾಡದೆ ಯೋಜನೆ ರೂಪಿಸಿದ್ದು, ತಕ್ಷಣವೇ ಯೋಜನೆಯನ್ನು ರದ್ದುಗೊಳಿಸುವಂತೆ ಪತ್ರ ಬರೆದಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಂತೆ ? 15ನೇ ಹಣಕಾಸು ಯೋಜನೆ ರದ್ದು ಮಾಡದಿದ್ದರೆ ಉಪವಾಸ ಸತ್ಯಾಗ್ರಹವನ್ನು ತಾಲೂಕು ಪಂಚಾಯಿತಿ ಎದುರುಗಡೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

* ನಾಗನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ನಿರ್ವಹಣೆ ಸರಿಯಾಗಿಲ್ಲ, ಚರಂಡಿಗಳು ಸ್ವಚ್ಛಗೊಂಡಿಲ್ಲ, ಸಿಸಿ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಇದೆಲ್ಲವೂ ಕಾಗದದಲ್ಲಿ ಹಣ ಖರ್ಚಾಗಿದೆ.ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಗ್ರಾ. ಪಂಚಾಯಿತಿಗೆ ಹೋದರೆ ಪಿಡಿಒ ಅಧಿಕಾರಿ ಮತ್ತು ಅಧ್ಯಕ್ಷರು ಕಾರ್ಯಲಯದಲ್ಲಿ ಇರುವುದಿಲ್ಲ. ಶಹಾಪುರದಲ್ಲಿ ವಾಸವಿರುವ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ನಮಗೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಫೋನ್ ಕರೆ ಸ್ವೀಕರಿಸದ ಪಿಡಿಓ

   * ನಾಗನಟಗಿ ಗ್ರಾಮ ಪಂಚಾಯಿತಿಯ ಪಿಡಿಓ ಅಣ್ಣಾರಾವ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ  ಎಂಬುದು ಬಲವಾದ ಆರೋಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ.ಸಮಸ್ಯೆಗಳನ್ನು ಆಲಿಸದ ಅಧಿಕಾರಿಗಳೇ ಹೀಗಾದರೆ ನಮ್ಮ ಸಮಸ್ಯೆಗೆ ಸ್ಪಂದಿಸುವುದು ಯಾರು.ಗ್ರಾಮ ಪಂಚಾಯಿತಿಯ ಪಿಡಿಓ ಮತ್ತು ಅಧ್ಯಕ್ಷರು ಸೇರಿ ತಮಗೆ ಬೇಕಿರುವ ಎಲೆಕ್ಟ್ರಿಕಲ್ ಮತ್ತು ಇತರೆ ವಸ್ತುಗಳನ್ನು ತಮಗೆ ಬೇಕಾದ ಅಂಗಡಿಗಳಲ್ಲಿ ಖರೀದಿಸುವರು.ಅಲ್ಲಮ ಪ್ರಭು  ಬುಕ್ ಸ್ಟಾಲ್, ಮ್ಯಾಕ್ಸ್ ಎಲೆಕ್ಟ್ರಿಕಲ್ ಅಂಗಡಿ, ಅಶೋಕ್ ಟ್ರೇಡರ್ಸ್ ಹಲವು ಕಡೆಗಳಲ್ಲಿ ಪಂಚಾಯಿತಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುತ್ತಾರೆ.  ಸದಸ್ಯರ ಗಮನಕ್ಕೆ ಬಾರದೆ ಹಣ ವರ್ಗಾವಣೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆರೋಪ ಮಾಡಿದ್ದಾರೆ.

   ಸರಕಾರ ಗ್ರಾಮೀಣ ಅಭಿವೃದ್ಧಿಗಾಗಿ ಕೋಟ್ಯಾಂತರ ಹಣ ಬಿಡುಗಡೆ ಮಾಡುತ್ತದೆ. ಆದರೆ ಇಲ್ಲಿ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಣ ದುರ್ಬಳಕೆ ಮಾಡುತ್ತಿದ್ದಾರೆ. ಈಗಾದರೆ  ಗ್ರಾಮೀಣಾಭಿವೃದ್ಧಿಯಾಗಲು ಸಾಧ್ಯವೇ ಎನ್ನುತ್ತಾರೆ ಸಾರ್ವಜನಿಕರು “

 

    ಇಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲೆ ಮಾಡಿ ಪ್ರತಿನಿಧಿಗಳು ಮತ್ತು ಭ್ರಷ್ಟ ಅಧಿಕಾರಿಗಳಿಂದ ಉನ್ನತ ಅಧಿಕಾರಿಗಳು ಹಣ ವಸೂಲಿ ಮಾಡಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ದುರ್ಬಳಕೆಯಾದ ಹಣವನ್ನು ಪುನಃ ಸರಕಾರಕ್ಕೆ ಹಿಂದಿರುಗಿ‌ಸುವಂತೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯಿತಿಯ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು.

 

ಅರುಣ್ ಕುಮಾರ್ ಡಿಎಸ್ಎಸ್ ತಾಲೂಕು ಸಂಚಾಲಕರು ಶಹಪುರ

About The Author