ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ನಿರ್ಲಕ್ಷ : ಮೂಲೆಗುಂಪಾದ ಸಿಟಿ ಸ್ಕ್ಯಾನಿಂಗ್ ? : ರೋಗಿಗಳ ಪರದಾಟ

ಶಹಪೂರು : ತಾಲೂಕಿನ ಸರಕಾರಿ ಆಸ್ಪತ್ರೆಯ ಬಡ ಜನರಿಗೆ ಅನುಕೂಲವಾಗಲೆಂದು ಸರಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದೆ. ಆದರೆ ಶಹಪುರ ತಾಲೂಕಿನ ಸರಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಗಳ ನಿರ್ಲಕ್ಷದಿಂದ ಮೂಲೆಗುಂಪಾಗಿದೆ. ಕೋಟಿಗಟ್ಟಲೆ ಹಣ ನೀಡಿ ಸರ್ಕಾರ ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಪ್ರತಿ ತಾಲೂಕಿಗೆ ಮಂಜೂರು ಮಾಡಲಾಗಿದ್ದು, ಸುಮಾರು ಆರು ತಿಂಗಳಾದರೂ ಸಿಟಿ ಸ್ಕ್ಯಾನಿಂಗ್ ಕೆಲಸ ಮಾಡದೆ ಹಾಗೆಯೇ ಆಸ್ಪತ್ರೆಯಲ್ಲಿ ಇಟ್ಟುಕೊಂಡಿದ್ದಾರೆ ?

 

* ತುರ್ತು ಚಿಕಿತ್ಸೆಗಾಗಿ ಮತ್ತು ಗಂಭೀರ ಚಿಕಿತ್ಸೆಗಾಗಿ ಸಿಟಿ ಸ್ಕ್ಯಾನಿಂಗ್ ಅತ್ಯವಶ್ಯಕವಾಗಿ ಬೇಕಾಗುತ್ತದೆ. ಬಡ ಜನರಿಗೆ ಕಾರ್ಮಿಕರಿಗೆ ಅನುಕೂಲವಾಗಲೆಂದು ಸರ್ಕಾರ ಸೌಲಭ್ಯವನ್ನು ಒದಗಿಸಿಕೊಟ್ಟಿದೆ.ಆದರೆ ಶಹಪುರ ತಾಲೂಕು ಆಸ್ಪತ್ರೆಯಲ್ಲಿ ಇದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎನ್ನುವ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ ?

*  ತಾಲೂಕು ಆಸ್ಪತ್ರೆಗಳ ವೈದ್ಯರ ಆಡಳಿತ ಮಂಡಳಿಯವರ ನಿರ್ಲಕ್ಷ ಬಲವಾಗಿ ಕೇಳಿ ಬರುತ್ತಿದ್ದು, ಇದರಿಂದ ರೋಗಿಗಳ ಸ್ಥಿತಿ ಚಿಂತಾ ಜನಕವಾಗಿದೆ. ಆದಷ್ಟು ಬೇಗ ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆಗೆ ಆಡಳಿತ ವೈದ್ಯರು ಗಮನಹರಿಸಬೇಕು. ಜಿಲ್ಲಾಧಿಕಾರಿಗಳು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

 

    ಶಹಪುರ ತಾಲೂಕು ಆಸ್ಪತ್ರೆಯಲ್ಲಿ ನಿಯಮಾನುಸಾರ ಪ್ರಶ್ನೆ ಮಾಡಿದವರನ್ನು, ರೋಗಿಗಳನ್ನು ಮತ್ತು ಅಮಾಯಕರನ್ನು ಸೆಕ್ಯೂರಿಟಿ ಗಾರ್ಡ್ಸ್ಗಳ ಮೂಲಕ ಭಯ ಹುಟ್ಟಿಸಿ ಹೊರ ಹಾಕಲ್ಪಡುತ್ತಾರೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಗುಂಪಾಗಿ ತಪಾಸಣೆ ಮಾಡುವುದು ಕಂಡುಬಂದಿದ್ದು ಇದರ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ “

About The Author