ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ತರಬೇತಿ ಶಿಬಿರ

ಶಹಾಪೂರ:ವಡಗೇರಾ ತಾಲೂಕಿನಲ್ಲಿ  ಪಂಚಾಯಿತಿ ಸಭಾಂಗಣದಲ್ಲಿ  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜನ ಪ್ರತಿನಿಧಿಗಳಿಗೆ ಕ್ಷೇತ್ರ ಮಟ್ಟದ  ಅಧಿಕಾರಿಗಳಿಗೆ ಪಂಪ್ ಆಪರೇಟರ್ ಗಳಿಗೆ ತರಬೇತಿ ಕಾರ್ಯಕ್ರಮ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ್ ಸಜ್ಜನ ಮಾತನಾಡುತ್ತಾ, ನಿಮ್ಮ ಗ್ರಾಮಗಳಲ್ಲಿ ಕಾರ್ಯಕ್ರಮ ಅನುಷ್ಠಾನಕೆ ತರಬೇಕು.  ಮುಂದಿನ ದಿನಗಳಲ್ಲಿ ನಿಮ್ಮ ಗ್ರಾಮಗಳಲ್ಲಿ ಅಳವಡಿಸಿಕೊಂಡು ಗ್ರಾಮ ಪಂಚಾಯತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ ಎಂದರು. ಕಲಿಕೆ ಟಾಟಾ ಟ್ರಸ್ಟ್ಸ್ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
     ತಾಲೂಕು ಪಂಚಾಯಿತಿ ನಿರ್ದೇಶಕರಾದ ಮಲ್ಲಿಕಾರ್ಜುನ ಮಾತನಾಡುತ್ತಾ, ಜನ ಜೀವನ್ ಹುಸೇನ್ ಯೋಜನೆಯನ್ನು ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರಬೇಕು. ಈ ಯೋಜನೆ ಮುಂದಿನ 30ವರ್ಷದ ವರೆಗೆ   ಗ್ರಾಮೀಣ ಮಟ್ಟದಲ್ಲಿ ಯಶಸ್ವಿಗೊಳಿಸಬೇಕು.  ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ ಬಹಳ ದಿನಗಳಿಂದ ಈ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಶ್ರೀ ಮಂಜುನಾಥ್ ಧನ್ನಿ ಕಾರ್ಯಕ್ರಮ ಹಿರಿಯ ಸಂಯೋಜಕರು ಮಾತನಾಡಿದರು.
    ಈ ಸಂದರ್ಭದಲ್ಲಿ ನರೇಗಾ ಸಹಾಯಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ನಿರ್ದೇಶಕರಾದ ರಾಘವೇಂದ್ರ ಜಿಲ್ಲಾ ಯೋಜನಾ ಸಂಯೋಜಕರಾಧ ಲಕ್ಷ್ಮೀ ಮಕಾಶಿ ಹಾಗೂ ಎಲ್ಲಾ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಹಾಗು ನಮ್ಮ ಕಲಿಕಾ ಟಾಟಾ ಟ್ರಸ್ಟ್ ನ WASH ಕಾರ್ಯಕ್ರಮ ಸಂಯೋಜಕರು, ಸಿಬ್ಬಂದಿಗಳು ಭಾಗವಹಿಸಿದರು.

About The Author