ಬೋಳ್ಳಾರಿ  ಗ್ರಾಮದ ನಿವಾಸಿ ಚೌಢಮ್ಮ ಹಾವು ಕಚ್ಚಿ ಸಾವು

ಶಹಪುರ: ತಾಲೂಕಿನ ಬೋಳ್ಳಾರಿ  ಗ್ರಾಮದ ನಿವಾಸಿಯಾದ ಚೌಢಮ್ಮ /ರಾಯಣ್ಣ (34) ಗುರುವಾರ ಸಂಜೆ 6:00 ಗಂಟೆಗೆ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವ ಸಂದರ್ಭದಲ್ಲಿ ಹಾವು ಕಚ್ಚಿದ ಪರಿಣಾಮ ಶಹಾಪುರ ಸರಕಾರಿ ಆಸ್ಪತ್ರೆಗೆ ದಾಖಲೆ ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಯುನೈಟೆಡ್ ಆಸ್ಪತ್ರೆಗೆ ರಾತ್ರಿ 9:00 ಗಂ. ಸಮಯಕ್ಕೆ ಕಳುಹಿಸಿಕೊಡಲಾಯಿತು.
  ಅಲ್ಲಿಯೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯರಾತ್ರಿ ಒಂದು ಗಂಟೆಗೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.ಮೃತ ಮಹಿಳೆಗೆ  ಮೂರು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದು  ನಾಲ್ಕು ಜನ ಮಕ್ಕಳನ್ನು ಅಗಲಿದ್ದಾರೆ. ಶವ ಪರೀಕ್ಷೆಗಾಗಿ ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಯಿತು. ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

Leave a Reply

Your email address will not be published. Required fields are marked *