ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹುದ್ದೆ ಖಾಲಿ ಭರ್ತಿ ಮಾಡುವಂತೆ ಮನವಿ

ಯಾದಗಿರಿ: ಜಿಲ್ಲೆಯ ಜಿಲ್ಲಾ ಪಂಚಾಯಿತಿಯಲ್ಲಿ ಉಪ ಕಾರ್ಯದರ್ಶಿ ಹುದ್ದೆ ಕಳೆದ 3 ತಿಂಗಳಿಗಳಿಂದ ಖಾಲಿ ಇದ್ದು ಕೂಡಲೇ ಈ ಹುದ್ದೆಯನ್ನು ಭರ್ತಿ ಮಾಡಬೇಕೆಂದು ವರ್ತೂರು ಪ್ರಕಾಶ್ ಯುವ  ಘರ್ಜನೆ  ಸಂಘಟನೆ  ಯಾದಗಿರಿ ಜಿಲ್ಲಾ ಘಟಕ  ವತಿಯಿಂದ ಸಂಘಟನೆಗೆ ಜಿಲ್ಲಾಧ್ಯಕ್ಷರಾದ ಐಕೂರು ಅಶೋಕ್ ಯಾದಗಿರಿ ಜಿಲ್ಲಾಧಿಕಾರಿಗಳ ಮುಖಂತರ ಮುಖ್ಯಮಂತ್ರಿಗಳಿಗೆ   ಮನವಿ ಸಲ್ಲಿಸಿದರು.

* ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾ ಪಂಚಾಯತ ಯಾದಗಿರಿಯಲ್ಲಿ  ಕಳೆದ 3 ತಿಂಗಳಿಂದ  ಉಪ ಕಾರ್ಯದರ್ಶಿ (DS) ಹುದ್ದೆ ಖಾಲಿ ಇದ್ದು ಸದರಿ  ಆರು ತಾಲೂಕಗಳ ಕಛೇರಿ ಜನರ ಕೆಲಸ  ಕಾರ್ಯಗಳು  ವಿಳಂಬವಾಗುತ್ತಿದ್ದು, ಪ್ರಸ್ತುತ ಇರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಜನರು ತಮ್ಮತಮ್ಮ ಸಮಸ್ಯೆಗಳನ್ನು ಒತ್ತುಕೊಂಡು  ಯಾದಗಿರಿಗೆ ಬಂದಾಗ ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸಭೆ ಮತ್ತು ವಿಡಿಯೋ ಕಾನ್ಫರೆನ್ಸ್ ಸಭೆಗಳಲ್ಲಿ ನಿರತರಾಗಿದ್ದಾರೆ  ಎಂದು ಅವರ ಆಪ್ತಕಾರ್ಯದರ್ಶಿ ಹೇಳುತ್ತಾರೆ.

*  ಹಾಗಾದರೆ ಜನರ ಕಷ್ಟಗಳಿಗೆ ಸ್ಪಂದಿಸುವವರು ಯಾರು ಇಲ್ಲದಂತಾಗಿದೆ.ಅದಕ್ಕಾಗಿ ಉಪ ಕಾರ್ಯದರ್ಶಿ (DS) ಹುದ್ದೆಯನ್ನು ಕೂಡಲೆ ಸರ್ಕಾರ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಪರಶುರಾಮ್ ,ಮರಿಲಿಂಗ, ನಾಗರಾಜ, ಆಕಾಶ್ ಬಂಡಾರಿ,  ಯಂಕಪ್ಪ,ನಿಂಗಪ್ಪ,ಸಾಬಣ್ಣ ಇತರರು ಇದ್ದರು

   ಈಗಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ಉಪ ಕಾರ್ಯದರ್ಶಿಗಳಾಗಿದ್ದು, ಪ್ರಭಾರಿಯಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ ?.

    ” ರಾಯಚೂರು ಜಿಲ್ಲೆಯಲ್ಲಿಯೂ ಕೂಡ ಇದೇ ರೀತಿಯಾಗಿ ಜಿಲ್ಲಾ ಯೋಜನಾಧಿಕಾರಿಗಳಿಗೆ ಪ್ರಭಾರಿಯಾಗಿ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು  ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನೀಡಿತ್ತು.ಅಲ್ಲಿರುವ ಸರಕಾರಿ ಅಧಿಕಾರಿಗಳು ಕೆ ಎ ಟಿ ಮೂಲಕ ನ್ಯಾಯಾಲಯ ಮೊರೆ ಹೋಗಿದ್ದರು.  ಕೂಡಲೇ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಕೆಎಟಿ  ಆದೇಶಿಸಿತ್ತು. ಇದನ್ನು ಮನಗಂಡ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.”