ರಾಜ್ಯ ಕಲಬುರ್ಗಿ ವಿಭಾಗದ ನೌಕರರ ಸಂಘದ ಉಪಾಧ್ಯಕ್ಷರಾಗಿ ರಾಯಪ್ಪ ಗೌಡ ಹುಡೇದ

ಶಹಾಪೂರ:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಅಧ್ಯಕ್ಷರಾದ ಸಿ ಎಸ್ ಷಡಾಕ್ಷರಿಯವರು ಮತ್ತು ಕೇಂದ್ರ ಸಂಘದ ಪದಾಧಿಕಾರಿಗಳು ರಾಜ್ಯ ಕೇಂದ್ರ ಸಂಘದ ಕಛೇರಿಯಲ್ಲಿ ಶಹಾಪುರ ತಾಲೂಕಿನ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ ರವರನ್ನು  ಕಲಬುರ್ಗಿ ವಿಭಾಗೀಯ ಉಪಾಧ್ಯಕ್ಷರಾಗಿ ನೇಮಕ ಮಾಡಿದ ಪ್ರಯುಕ್ತ ತಾಲೂಕಿನ ಅಧ್ಯಕ್ಷರಾದ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಲು ನಿರ್ವಹಿಸಿ ಕೊಟ್ಟಿರುವುದು ಸಂತಸ ತಂದಿದೆ ಎಂದು ರಾಯಪ್ಪ ಗೌಡ ಹುಡೇದ  ಹೇಳಿದರು.
      * ಈ ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ ಅವರು ಸರಕಾರಿ ನೌಕರರ ಕ್ಷೇಮಾಭಿವೃದ್ಧಿಯನ್ನು ನೋಡಿಕೊಂಡು ಹೋಗಲು ಇನ್ನು ಹೆಚ್ಚಿನ ಜವಾಬ್ದಾರಿ ಬಂದಿದೆ ಎಂದು ಹೇಳಿದರು.
  * ಬಸನಗೌಡ ಬೆಳ್ಳಿಕಟ್ಟಿ ಶಾಂತರೆಡ್ಡಿ ತಂಬಿಗಿ ಭೀಮನಗೌಡ ಬಿರಾದಾರ ಗೋಪಾಲ ಬಿಜಾಸಪುರ ರಾಮನಗೌಡ ಖಾನಾಪುರ ಸೇರಿದಂತೆ ಇತರರು ಇದ್ದರು

Leave a Reply

Your email address will not be published. Required fields are marked *