ಬಡವರ ಪಾಲಿಗೆ ದೀನ ದಯಾಳು ಹನುಮೆಗೌಡ ಬೀರನಕಲ್

ಬಸವರಾಜ ಕರೇಗಾರ

ಯಾದಗಿರಿ: ಜಿಲ್ಲೆಯಲ್ಲಿ ಬಡವರೆಂದು ಕಷ್ಟದಲ್ಲಿದ್ದೇವೆ ಎಂದು ಹೇಳಿಕೊಂಡು ಬಂದವರೆಲ್ಲರಿಗೂ ಇಲ್ಲ ಎನ್ನುವ ಭಾವನೆಗಳಿಲ್ಲದೆ ಸಹಾಯಧನ ಕಾಳು ಕಡಿ ಸಹಿತ ದಾನ ಮಾಡಿ ದೀನದಲಿತರ ಬಂಧು ಎಂದು ಎನಿಸಿಕೊಂಡವರೆಂದರೆ ಅದು ದೀನ ದಯಾಳು ಹನುಮೆಗೌಡ ಬೀರನಕಲ್.

   * ಅಹಿಂದ ನಾಯಕರಿಂದ ಜಿಲ್ಲೆಯಲ್ಲಿ ತನ್ನದೇ ಆದ ವರ್ಚಸ್ಸಿನಲ್ಲಿ ಇರುವ ನಾಯಕರಿ‌ವರು. ಹಲವಾರು ನಾಯಕರು ಅಧಿಕಾರಕ್ಕಾಗಿ ಚುನಾವಣೆಯಲ್ಲಿ ಹಣ ಚೆಲ್ಲಿ ಅಧಿಕಾರ ಗಿಟ್ಟಿಸಿಕೊಂಡ ನಂತರ ಜನರನ್ನೇ ಮರೆಯುವ ಈ ಕಾಲದಲ್ಲಿ ಯಾವುದೇ ಅಧಿಕಾರವಿಲ್ಲದೆ ಬೇಡಿ ಬಂದ ಜನರಿಗೆ ಇಲ್ಲವೆನ್ನದೆ ತನ್ನದೇ ಆದ ಧನ ಸಹಾಯ ಮಾಡಿ ಕಳುಹಿಸುತ್ತಿರುವ ಒಬ್ಬ ಸಮಾಜದ ಚಿಂತಕನೆಂದರೆ ಹನುಮೆಗೌಡರು.

* ಬಡ ಜನರ ಶಿಕ್ಷಣಕ್ಕಾಗಿ ಧನಸಹಾಯ, ಮದುವೆಗೆಂದು ಹಣವಿಲ್ಲ ಎಂದು ಬಂದವರಿಗೆ ಕಾಳು ಕಡಿ, ದೇವಸ್ಥಾನದ ನಿರ್ಮಾಣಕ್ಕಾಗಿ ಲಕ್ಷಾನುಗಟ್ಟಲೆ ಧನ ಸಹಾಯ ಮಾಡಿದ್ದಾರೆ. ಜಿಲ್ಲೆಯ ಹಲವಾರು ಗ್ರಾಮಗಳಿಗೆ ಅವರಿಂದ ಧನಸಹಾಯ ತೆಗೆದುಕೊಂಡು ಹೋದವರೇ ಹೆಚ್ಚು.ಯಾದಗಿರಿ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಇಟ್ಟುಕೊಂಡಿರುವ ಹನುಮೆ ಗೌಡರು ಪ್ರಥಮ ದರ್ಜೆ ಗುತ್ತಿಗೆದಾರರು. ಹಲವಾರು ವಿದ್ಯಾವಂತರು ಅವರ ಕೈಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಾತಿ ಧರ್ಮವಿಲ್ಲದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

    * ಯಾದಗಿರಿ ಕ್ಷೇತ್ರದಲ್ಲಿ ತನ್ನದೇ ಆದ ಮತದಾರರನ್ನು ಹೊಂದಿರುವ ಹಣಮೆಗೌಡರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸ್ವಲ್ಪದರಲ್ಲೇ ಸೋಲುಂಡರು. ಬಿಜೆಪಿ ಜೆಡಿಎಸ್ ಪಕ್ಷದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡ ಇವರು ತನ್ನದೇ ಮತದಾರರನ್ನು ಕ್ಷೇತ್ರದಲ್ಲಿ ಹೊಂದಿದ್ದಾರೆ. ಸದಾ ಮೌನದಿಂದಿರುವ ಇವರು ಇತ್ತೀಚೆಗೆ ಜೆಡಿಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಅಹಿಂ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ಬಡವರ ಪಾಲಿಗೆ ಆಧಾರ ಸ್ತಂಭವಾಗಿದ್ದಾರೆ, ಇಂದಿನ ದಿನಗಳಲ್ಲಿ ಜಾತಿ ಆಧಾರಗಳಲ್ಲಿ ಚುನಾವಣೆಗಳು ನಡೆಯುತ್ತಿರುವುದು ದುರದೃಷ್ಟಕರ.

* ಇಂತಹ ದಿನಗಳಲ್ಲಿ ತನ್ನದೇ ವರ್ಚಸ್ಸು ಉಳಿಸಿಕೊಂಡು ಬಂದಿರುವ ಇವರು ಕ್ಷೇತ್ರದ ಜನರ ಆಶಾದಾಯಕವಾಗಿ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೋ ತಿಳಿಯುತ್ತಿಲ್ಲ. ಇಂತಹ ನಾಯಕರು ಬಡವರ ರಕ್ಷಕರು ಕಣ್ಣೀರು ಒರೆಸಲು ಶಾಸಕರಾಗಿ ಬಂದರೆ ಕ್ಷೇತ್ರದ ಬಡ ಜನರಿಗೆ ಆಶದಾಯಕವಾಗುವುದು ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ.

About The Author