ಸಾಬಣ್ಣ ಗಟ್ಟು ಬಿಚ್ಚಾಲಿ ಕಾಂಗ್ರೆಸ್ ತೊರೆದು ಎಎಪಿ ಸೇರ್ಪಡೆ

ರಾಯಚೂರು:ಅರವಿಂದ್ ಕೇಜ್ರಿವಾಲ್ ರವರು ಸ್ಥಾಪಿಸಿದ ಎಎಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ, ದೆಹಲಿಯಲ್ಲಿನ ಎಎಪಿ ಪಕ್ಷದ ಆಡಳಿತದ ವೈಖರಿ ಬಡವರಿಗೆ ಅವರಿಗಿರುವ ಕಾಳಜಿ ರೈತರಿಗೆ ಮತ್ತು ಶಿಕ್ಷಣಕ್ಕೆ ದೆಹಲಿ ಸರ್ಕಾರ ಹಾಗೂ ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಎಎಪಿ ಪಕ್ಷದ ಸರ್ಕಾರದ ನಿರ್ಧಾರಗಳು ಜನಪರವಾಗಿವೆ. ಕಾರ್ಮಿಕರ ಅಲ್ಪಸಂಖ್ಯಾತರ ಎಲ್ಲಿ ವರ್ಗಗಳ ಜನಪರ ಪಕ್ಷ ಎಂದು ಹೆಸರು ಗಳಿಸಿರುವ ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ರಾಯಚೂರಿನ ಕಾಂಗ್ರೆಸ್ ಮುಖಂಡರಾದ ಸಾಬಣ್ಣ ಗಟ್ಟು ಬಿಚ್ಚಾಲಿಯವರು ಇಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿ  ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.

ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದ್ದು, ಕಾರ್ಯಕರ್ತರನ್ನು ಕಡೆಗಣಿಡಿಸಲಾಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ತೊರೆದು ಎಎಪಿ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಹೇಳಿದರು. ಪಕ್ಷದ ಟೋಪಿ, ಶಾಲು ಹಾಕಿ ಆಮ್ ಅದ್ಮಿ ಪಾರ್ಟಿಗೆ ಸೇರ್ಪಡೆಮಾಡಿಕೊಂಡರು.

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಜೋನ್-5 ಬಸವರಾಜ ಗುತ್ತೆದಾರ್, ರಾಯಚೂರು ಗ್ರಾಮೀಣ ಸಂಘಟನಾ ಕಾರ್ಯದರ್ಶಿಯಾದ ವಿರೇಶ.ಆರ್ ಇನ್ನಿತರರು ಉಪಸ್ಥಿತರಿದ್ದರು.

About The Author