ಕೆಂಭಾವಿ: ಶಾಸಕರಿಂದ ಘನತ್ಯಾಜ್ಯ ಘಟಕ ಉದ್ಘಾಟನೆ

ಯಾದಗಿರಿ : ಕೆಂಭಾವಿ ಪಟ್ಟಣದ ಪುರಸಭೆ ಆವರಣಯ ವಾರ್ಡ ನಂ:20 ಪತ್ತೆಪೂರದಲ್ಲಿ ಸ.ನಂ.512 ರಲ್ಲಿ 10 ಎಕರೆ ಜಮೀನು ಸರ್ಕಾರದಿಂದ ಮಂಜೂರು ಮಾಡಿಸಿ, 2019-2020 ನೇ ಸಾಲಿನ (ಡಿಪಿಆರ್) ಯೋಜನೆ ಅಡಿಯಲ್ಲಿ 250.34 ಲಕ್ಷ ರೂ. ವೆಚ್ಚದಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕದ ಉಧ್ಘಾಟನೆ ಗೈದ ಶಾಸಕರು ಮಾತನಾಡುತ್ತಾ,ತ್ಯಾಜ್ಯ ಕಾಯ್ದೆಯ ಉದ್ದೇಶವು ನೈಸರ್ಗಿಕ ಸಂಪನ್ಮೂಲಗಳ ತರ್ಕಬದ್ಧ ಬಳಕೆಯನ್ನು ಉತ್ತೇಜಿಸುವ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುವುದು ಮತ್ತು ತ್ಯಾಜ್ಯದಿಂದ ಉಂಟಾಗುವ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಮತ್ತು ಹಾನಿಯನ್ನು ತಡೆಗಟ್ಟದಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಹೇಳಿದರು. ಜನಸಂಖ್ಯೆಯ ಹೆಚ್ಚಳ ಮತ್ತು ಪ್ರಪಂಚದಾದ್ಯಂತ ಜನರ ಸುಧಾರಿತ ಜೀವನ ಶೈಲಿಯು ಸಂಪನ್ಮೂಲಗಳ ಅತಿಯಾದ ಶೋಷಣೆಗೆ ಕಾರಣವಾಗುತ್ತದೆ.

    * ಪಟ್ಟಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸ್ವಚ್ಛ ಸಂಕೀರ್ಣ ಘಟಕ ಸರಿಯಾಗಿ ನಿರ್ವಹಣೆ ಆಗಬೇಕು. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಪೌರ ಕಾರ್ಮಿಕರ ಜವಾಬ್ದಾರಿಯಿಂದ ಕಾರ್ಯನಿವಹಿಸಬೇಕೆಂದು ಸೂಚಿಸಿದರು.

      * ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪಿ.ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವಾಮನರಾವು ದೇಶಪಾಂಡೆ, ಶರಣಬಸ್ಸು ಕಾಕ ದಿಗ್ಗಾವಿ, ಕೃಷ್ಣಯ್ಯ ಗುತ್ತೇದಾರ, ಬಸನಗೌಡ ಹೊಸಮನಿ ಯಾಳಗಿ, ಬಸವರಾಜ ಎಸ್ ಪಾಟೀಲ ಚಿಂಚೋಳಿ, ಸಾಹೇಬಲಾಲ ಆಂದೇಲಿ,ಲಾಲಅಹ್ಮದ್ ಹುಳಬುತ್ತಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಜೀವನ್ ಕೆ.ಕಟ್ಟಿಮನಿ, ಪುರಸಭೆ ಮಾಜಿ ಅಧ್ಯಕ್ಷ ದೇವಪ್ಪ ಮ್ಯಾಗೇರಿ, ಪರಶುರಾಮ ಬಳಬಟ್ಟಿ.ಪುರಸಭೆ ಸದಸ್ಯರಾದ ವಿಲಾಸರಾವ್ ದೇಶಪಾಂಡೆ, ರಹೀಮಾನ ಪಟೇಲ್ ಯಲಗೋಡ,ಸುಧಾಕರ ಡಿಗ್ಗಾವಿ,ನಾನಗೌಡ ಪಾಟೀಲ,ಆರೀಫ್ ಹುಸೇನ್ ಖಾಜಿ,ಚಳಿಗೆಪ್ಪ ವಡ್ಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..

About The Author