ಹತ್ತಿಗೂಡುರು ಗ್ರಾ. ಪಂ. ನಿರ್ಲಕ್ಷ : ಚರಂಡಿಯಾಗಿ ಮಾರ್ಪಟ್ಟ ರಸ್ತೆ ? : ಕೊಳಚೆ ನೀರಿನಲ್ಲಿ ಓಡಾಟ : ಸಾಂಕ್ರಾಮಿಕ ರೋಗ ಹರಡುವ ಭೀತಿ ?

 ಬಸವರಾಜ ಕರೆಗಾರ

ಶಹಾಪುರ : ತಾಲೂಕಿನ ಹತ್ತಿಗೂಡುರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೊಂಗಂಡಿ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲವು ರಸ್ತೆಗಳ ಬದಿ  ನಿಂತ ನೀರಿನಿಂದ ಚರಂಡಿಯಾಗಿ ಮಾರ್ಪಟ್ಟಿವೆ ?. ರಸ್ತೆಯ ಮೇಲೆ ನೀರು ಹರಿದಾಡುತ್ತಿರುವುದರಿಂದ ಜನರಿಗೆ ಓಡಾಡಲು ತುಂಬಾ ತೊಂದರೆಯಾಗಿದ್ದು, ಅನಿವಾರ್ಯ ಪರಿಸ್ಥಿತಿ ಇರುವ ಕಾರಣ ಚರಂಡಿಯ ನೀರಿನಲ್ಲಿಯೇ ಹೊಡಾಡುವ ಪರಸ್ಥಿತಿ  ಉಂಟಾಗಿದೆ.ಗ್ರಾಮದ ವಾರ್ಡ್ ನಂ. ಎರಡರಲ್ಲಿ ಅಂಜಳಮ್ಮ ಮನೆ ಪಕ್ಕದಲ್ಲಿ, ಸುಭಾಷ್ ಗುತ್ತೇದಾರ್ ಮನೆ ಹಿಂದುಗಡೆ, ಮಾಳಪ್ಪ ಪೂಜಾರಿ ಮನೆಗಳು ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳ ಮುಂದೆ ಚರಂಡಿ ನೀರು ನಿಂತಿರುವುದರಿಂದ ಅಲ್ಲಿನ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಇದರ ಬಗ್ಗೆ ಗ್ರಾಮ ಪಂಚಾಯಿತಿಯು ದಿವ್ಯ ನಿರ್ಲಕ್ಷ ವಹಿಸುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ನಾವು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರೂ ಲಿಖಿತ ರೂಪದಲ್ಲಿ ಕೊಟ್ಟರೂ ಮೌಕಿಕವಾಗಿ ಹೇಳಿದರು ಯಾವುದೇ ಪ್ರಯೋಜನಕಾರಿಯಾಗಿಲ್ಲ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.

 

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ನಿರ್ಲಕ್ಷ : ಫೋನ್ ಕರೆ ಸ್ವೀಕರಿಸಿದ ಪಿಡಿಓ.

 

 

   * ಸಾರ್ವಜನಿಕ ಅಧಿಕಾರಿಗಳಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಕಳೆದೆರಡು ವರ್ಷಗಳಿಂದ  ತಂದರು ಯಾವುದೇ ಪ್ರಯೋಜನಕಾರಿಯಾಗಿಲ್ಲ. ಸಾರ್ವಜನಿಕರ ಸಮಸ್ಯೆಗಳನ್ನು ಅರಿತುಕೊಂಡು ಪರಿಹಾರ ಸೂಚಿಸುವ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರುವುದು ದುರದೃಷ್ಟಕರ. ಯಾವುದೇ ಸಮಸ್ಯೆಗಳನ್ನು ಪಿಡಿಒ ರವರಿಗೆ ಫೋನ್ ಕರೆ ಮೂಲಕ ತಿಳಿಸುವುದಕ್ಕಾಗಿ ಕರೆ ಮಾಡಿದರೆ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

    * ಮನೆಯ ಮುಂದೆ ನೀರು ನಿಂತಿರುವುದರಿಂದ ಗ್ರಾಮದಲ್ಲಿ ಚರಂಡಿಯ ನೀರು ಕೂಡ ಅದೇ ಸ್ಥಳದಲ್ಲಿ ಬಂದು ಸೇರುತ್ತಿರುವುದರಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು  ಜಿಲ್ಲಾ ಪಂಚಾಯಿತಿಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಇದರ ಬಗ್ಗೆ ಸಂಪೂರ್ಣ ಗಮನಹರಿಸಿ ಸಮಸ್ಯೆಗೆ ಸ್ಪಂದಿಸುತ್ತಾರೋ ಇಲ್ಲವೊ ಕಾದು ನೋಡಬೇಕಿದೆ.?

 

     ಗ್ರಾಮದ ಹತ್ತರಿಂದ ಹದಿನೈದು ಮನೆಗಳ ಮುಂದೆ  ಚರಂಡಿ ನೀರು ನಿಂತಿರುವುದರಿಂದ ನಾವು ಓಡಾಡಲು ತೊಂದರೆಯಾಗುತ್ತಿದೆ. ನಿಂತ ನೀರನ್ನು ಹೊರ ಪ್ರದೇಶಕ್ಕೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಮತ್ತು ಪಿಡಿಓ ನಿರ್ಲಕ್ಷ ವಹಿಸಿದ್ದಾರೆ.ಇದು ಕಳೆದೆರಡು ವರ್ಷಗಳಿಂದ ಇದೇ ರೀತಿ ಇದೆ.

ಮಾಳಪ್ಪ ಕೊಂಗಂಡಿ ಗ್ರಾಮದ ನಿವಾಸಿ 

About The Author