ಚರ್ಮಗಂಟು ರೋಗ : ಜಾಗೃತಿ ಮೂಡಿಸುವಂತೆ ಒತ್ತಾಯ

ವಡಗೇರಾ:ತಾಲೂಕಿನ ಕೆಲ ಗ್ರಾಮಗಳಲ್ಲಿ ಲಂಪಿ ಸ್ಕಿನ್ ಚರ್ಮಗಂಟು ಕಾಯಿಲೆ ಜಾನುವಾರುಗಳಿಗೆ ಬೆಂಬಿಡದೆ ಕಾಡುತ್ತಿದ್ದು,ಜಾನುವಾರಗಳು ಈ ರೋಗಕ್ಕೆ ಬಲಿಯಾಗುತ್ತಿವೆ ಎಂಬ ಭಯ ರೈತರಲ್ಲಿ ಶುರುವಾಗಿದೆ. ಗ್ರಾಮೀಣ ಭಾಗದಲ್ಲಿ  ಪಶುವೈದ್ಯರು ಕಡ್ಡಾಯವಾಗಿ ಹಾಜರಿದ್ದು ರೈತರಲ್ಲಿ ಜಾಗೃತಿ ಮೂಡಿಸಿ ಕೂಡಲೆ  ಪ್ರತಿ ಗ್ರಾಮಗಳಲ್ಲಿ ಲಸಿಕಾ ಕಾರ್ಯ ಆರಂಭಿಸಬೇಕೆಂದು ತಾಲೂಕು ಪಂಚಾಯತ ಮಾಜಿ ಸದಸ್ಯ ಮರಲಿಂಗಪ್ಪ  ಕುಮನೂರು .ಪಶು ಇಲಾಖಾ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ದನಗಳು ಹೆಮ್ಮೆಗಳು ಎತ್ತುಗಳು ಸಣ್ಣ ಕರುಗಳಿಗೂ  ಚರ್ಮಗಂಟು ಕಾಯಿಲೆಯ ಲಸಿಕೆಯನ್ನು  ನೀಡಿ ರೋಗವನ್ನು ಹತೋಟಿಗೆ ತರುವಂತೆ ಮನವಿ ಮಾಡಿದರು