ಮಹಾಶೈವ ಧರ್ಮಪೀಠಕ್ಕೆ ಶ್ರೀ ಗಿರಿಮಲ್ಲದೇವರು ಸ್ವಾಮೀಜಿ ಭೇಟಿ

ವಿವಿಢೆಸ್ಕ:

ಮಹಾಶೈವ ಧರ್ಮಪೀಠಕ್ಕೆ ಇಂದು ದೇವರಗುಡ್ಡ- ಹತ್ತಿಗೂಡೂರು ತಪೋವನ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗಿರಿಮಲ್ಲದೇವರು ಅವರು ಭೇಟಿ ನೀಡಿದರು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು‌ ಗಿರಿಮಲ್ಲದೇವರು ಸ್ವಾಮೀಜಿಯವರನ್ನು ಶಿವಶಕ್ತ್ಯಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠವು ಈ ಭಾಗದ ಶಿವಶಕ್ತಿ ಜಾಗೃತಿಕ್ಷೇತ್ರವಾಗಿ ಬೆಳೆಯುತ್ತಿರುವುದನ್ನು ಗಿರಿಮಲ್ಲದೇವರು ಸ್ವಾಮೀಜಿಯವರು ಹರ್ಷಾಭಿಮಾನಗಳಿಂದ ಹೊಗಳಿದರು. ಶ್ರೀ ಕ್ಷೇತ್ರ ಕೈಲಾಸಕ್ಕೆ ದರ್ಶನಾರ್ಥಿಗಳಾಗಿ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮುದಾಯ ಭವನ ಮತ್ತು ಯಾತ್ರಿ ನಿವಾಸ,ದಾಸೋಹ ಭವನಗಳು ಸೇರಿದಂತೆ ಮುಂಬರುವ ದಿನಗಳಲ್ಲಿ ಶ್ರೀಕ್ಷೇತ್ರದಲ್ಲಿ ತೆಗೆದುಕೊಳ್ಳಲಿರುವ ಅಭಿವೃದ್ಧಿ ಕಾರ್ಯಚಟುವಟಿಕೆಗಳ ಬಗ್ಗೆ‌ ಪೀಠಾಧ್ಯಕ್ಷರು ಸ್ವಾಮೀಜಿಯವರಿಗೆ ವಿವರಿಸಿದರು.ಉಭಯತ್ರರು ಸುಮಾರು ಎರಡು ಘಂಟೆಗಳ ಆಧ್ಯಾತ್ಮಿಕ ಸಂವಾದ ನಡೆಸಿದರು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

Leave a Reply

Your email address will not be published. Required fields are marked *