ಭಾರತ ಜೋಡೊ ಯಾತ್ರೆ ಪೂರ್ವ ಭಾವಿ ಸಭೆ : ಅಕ್ಟೋಬರ್ 21ರಂದು ರಾಯಚೂರಿನಲ್ಲಿ 10,000ಕ್ಕೂ ಹೆಚ್ಚು ಜನರು ಭಾಗಿ — ದರ್ಶನಾಪುರ

* ಸರಕಾರದ ವಿರುದ್ಧ ವಾಗ್ದಾಳಿ
* 40% ಸರಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ.
* ಬಡವರ ಧ್ವನಿ ಕಾಂಗ್ರೆಸ್
* ಶ್ರೀಮಂತರ ಅಭಿವೃದ್ಧಿಯೆ ಬಿಜೆಪಿ ಸರಕಾರದ ಸಾಧನೆ.

ಶಹಾಪುರ:- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೈಗೊಂಡಿರುವ ಭಾರತ ಜೋಡು ಯಾತ್ರೆ ಯಶಸ್ವಿಯಾಗಿ ಸಾಗುತ್ತಿದ್ದು, ಶಹಾಪುರ ಕ್ಷೇತ್ರದಿಂದ ಅಕ್ಟೋಬರ್ 21 ರಂದು ರಾಯಚೂರಿನಲ್ಲಿ 10,000ಕ್ಕೂ ಹೆಚ್ಚು ಜನರು ಭಾಗವಹಿಸಿ ಪಾದಯಾತ್ರೆ ಯಶಸ್ವಿಗೊಳಿಸಲಾಗುವುದು ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ ಹೇಳಿದರು.ಇಂದು ನಗರದ ಭೀ,ಗುಡಿಯ ಬಲ ಭೀಮೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತ ಜೋಡೋ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

    * ಬಿಜೆಪಿಯವರು ಟೀಕೆ ಮಾಡುವಂತೆ ಈ ಯಾತ್ರೆ ಒಡೆದ ದೇಶ ಜೋಡಿಸುವುದು ಎಂದು ಹೇಳುತ್ತಿದ್ದಾರೆ.ಆದರೆ ದೇಶದ ಜನರ ಭಾವನೆಗಳನ್ನು,ಮನಸ್ಸುಗಳನ್ನು ಜೋಡಿಸುವುದಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.ದೇಶದಲ್ಲಿ ಜಾತಿ ಧರ್ಮಗಳ ಮಧ್ಯೆ ಜಗಳ ಹಚ್ಚಿ ಚುನಾವಣೆ ಗೆಲ್ಲುತ್ತಿರುವ ಬಿಜೆಪಿಯವರು ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸಿ ಗೆಲುವು ಸಾಧಿಸಲಿ ನೋಡೋಣ ಎಂದು ಸವಾಲು ಎಸೆದರು.

* ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಸಾಧನೆ ಏನು ? ರೈತರು ಬಡವರು ಕಾರ್ಮಿಕರು ದೇಶದಲ್ಲಿ ಬದುಕಲಾರದಂತ ಸ್ಥಿತಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಬಡವರ ಪರ ಹಲವಾರು ಯೋಜನೆಗಳನ್ನು ಕೊಟ್ಟು ನಿಷ್ಕಲ್ಮಶ ಆಡಳಿತ ನಡೆಸಿದರು. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರಬೇಕು. ಬಿಜೆಪಿಯವರು ಶ್ರೀಮಂತರ 9 ಲಕ್ಷ ಕೋಟಿ ಸಾಲ ಮನ್ನ ಮಾಡಿದರು. ಆದರೆ ರೈತರ ಒಂದು ಲಕ್ಷ ಕೋಟಿ ಸಾಲ ಮನ್ನ ಮಾಡಲು ಸಾಧ್ಯವಿಲ್ಲ ಎಂದರು.

  * ರೈತರ ಗೊಬ್ಬರ ಎಣ್ಣೆ ಇಂದು ದುಪ್ಪಟ್ಟಾಗಿದೆ. ರೈತರ ಬೆಲೆಗಳು ಹಾಗೆ ಇವೆ. ಇದರಿಂದ ರೈತರ ಬೆಳೆಗಳು ಹತ್ತು ಪಟ್ಟು ಎಂದು ಹೇಳುತ್ತಿರುವ ಬಿಜೆಪಿಯವರು  ಹೇಗೆ ಎಂದು ಹೇಳುತ್ತಿಲ್ಲ.ರಾಜ್ಯದಲ್ಲಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಪ್ರಧಾನಿಗಳು 10% ಸರಕಾರ ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಪ್ರಸ್ತುತ ಆಡಳಿತದಲ್ಲಿ 40% ಸರಕಾರ. ಪ್ರಧಾನಿಗಳು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.

* ರಾಜ್ಯದ ಎಲ್ಲಾ ಇಲಾಖೆಯಲ್ಲಿ ವರ್ಗಾವಣೆ ದಂಧೆ ಸೇರಿದಂತೆ ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ನೌಕರರು ಬೇಸತ್ತಿದ್ದಾರೆ ಎಂದು ಹೇಳಿದರು.ಜಿಲ್ಲೆಯಲ್ಲಿ ಸತತವಾಗಿ ಮೂರು ತಿಂಗಳುಗಳಿಂದ ಮಳೆ ಸುರಿಯುತ್ತಿದ್ದು ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಕಣ್ಣಾಯಿಸಿಲ್ಲ.ಇದುವರೆಗೂ ನಷ್ಟ ಪರಿಹಾರವನ್ನು ಯಾವ ರೈತರಿಗೂ ಸಿಕ್ಕಿಲ್ಲ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಸಹಕಾರದಿಂದ ಕಲ್ಯಾಣ ಕರ್ನಾಟಕಕ್ಕೆ 371 ಜೆ ಕಾಯ್ದೆ ಜಾರಿಗೆ ಬಂದಿರುವುದರಿಂದ ಈ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉದ್ಯೋಗಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.

* ರಾಜ್ಯ ಕಾರ್ಯದರ್ಶಿಗಳಾದ ಮರಿಗೌಡ ಹುಲಕಲ್  ಮಾತನಾಡುತ್ತಾ, ಮೂರು ಸಾವಿರದ ಐದುನೂರ ಎಪ್ಪತ್ತೈದು ಕಿಲೋಮೀಟರ್ ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ರಾಹುಲ್ ಗಾಂಧಿಯವರ ನಡಿಗೆಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು. ಜಾತ್ಯತೀತ ರಾಷ್ಟ್ರ ನಮ್ಮದು. ಜಾತಿ ಧರ್ಮ ಎನ್ನದೆ ಎಲ್ಲರೂ ಒಂದೇ ಎಂದು ಭಾವಿಸಿ ಯಾತ್ರೆಗೆ ಕೈಜೋಡಿಸೋಣ ಎಂದರು.

* ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಸಲಾದಪುರವರು ಮಾತನಾಡುತ್ತಾ, ಭಾರತ್ ಜೋಡು ಯಾತ್ರೆ ಒಂದು ಪಕ್ಷದ ಯಾತ್ರೆಯಲ್ಲ. ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸೋಣ.ಬಿಜೆಪಿ ಸರಕಾರವನ್ನು ಕಿತ್ತೆಸೆದು ಬಡವರ ಕಾರ್ಮಿಕರ ಹಿತ ಕಾಯುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರೋಣ ಎಂದು  ಹೇಳಿದರು.ಕೇಂದ್ರದ ಬಿಜೆಪಿ ಸರಕಾರದಿಂದ ರಾಷ್ಟ್ರದ ಶ್ರೀಮಂತರಿಗೆ ಲಾಭವಾಗಿದೆ. ರೈತರ ಹೆಸರಿನಲ್ಲಿ  ಪ್ರಧಾನಿ ಫಸಲ್ ಭೀಮಾ ಯೋಜನೆಯು ಕೆಲವೇ ರೈತರಿಗೆ ತಲುಪುತ್ತಿದ್ದು, ಇನ್ನುಳಿದ ಹಣವು NGO ದವರ ಪಾಲಾಗುತ್ತಿದೆ. ರಾಷ್ಟ್ರದ ತೆರಿಗೆದಾರರ ದುಡ್ಡು ಆರ್ ಎಸ್ ಎಸ್ ನವರ ಪಾಗುತ್ತಿರುವುದು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು.

 

ವಿರೋಧ ಪಕ್ಷದಲ್ಲಿದ್ದು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ.

ಕ್ಷೇತ್ರದಲ್ಲಿ ವಿದ್ಯುತ್ ಕೊರತೆ ನೀಗಿಸಲು

* 110 ಕೆ.ವಿ.- ನಗನೂರು

* 110 ಕೆ.ವಿ. ಶಿರ್ವಾಳ

* 110 ಕೆ.ವಿ.ಭೀ,ಗುಡಿ

* 110 ಕೆ.ವಿ ಗುಂಡಗುರ್ತಿ

* 110 ಕೆ.ವಿ. ವನದುರ್ಗಕ್ಕೆ

ವಿದ್ಯುತ್ ಸರಬರಾಜು ಮಾಡಲಾಗಿದೆ.* ಶಹಾಪುರಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಭೀಮ ನದಿಯಿಂದ ಪೈಪ್ಲೈನ್ ಮೂಲಕ ತಾಲೂಕಿಗೆ ಸತತವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಶರಣಬಸಪ್ಪಗೌಡ ದರ್ಶನಾಪುರ

ಶಾಸಕರು ಶಹಾಪುರ

About The Author