ನಾಳೆ ಡಾ. ಮೂರ್ತಿ ಕ್ಲಿನಿಕಲ್ ಆಸ್ಪತ್ರೆ ಉದ್ಘಾಟನೆ

ಶಹಪುರ:- ತಾಲೂಕಿನ ಶ್ರೇಷ್ಠ ಹೋಮಿಯೋಪತಿ ವೈದ್ಯಾಧಿಕಾರಿಯಾದ ಡಾ. ಕೃಷ್ಣಮೂರ್ತಿ ಮತ್ತು ಡಾ. ದೀಪಿಕಾ ಕೃಷ್ಣ ಮೂರ್ತಿಯವರು ಡಾ. ಮೂರ್ತಿ ಹೋಮಿಯೋಪತಿ ಆಸ್ಪತ್ರೆಯನ್ನು ಕಲಬುರ್ಗಿ ನಗರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಡಾ. ಕೃಷ್ಣಮೂರ್ತಿಯವರು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

* ಸೂಪರ್ ಮಾರುಕಟ್ಟೆ ಸಿಟಿ ಸೆಂಟರ್ ವಾದಿರಾಜ ಕಾಂಪ್ಲೆಕ್ಸ್ ನಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ. ಅಶೋಕ್ ಪಾಟೀಲ್ ಹಾಗೂ ಮಾಣಿಕರೆಡ್ಡಿ  ಹೋಮಿಯೋಪತಿ ವೈದ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ. ವಿಜಯಲಕ್ಷ್ಮಿ ಹಾಗೂ ಡಾ. ಮಹಾದೇವ ಪ್ರಸಾದ ಸೇರಿದಂತೆ ಇತರ ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು

* ಡಾ.ಮೂರ್ತಿ ಹೋಮಿಯೋಪತಿ ಆಸ್ಪತ್ರೆಯೂ ಯಾದಗಿರಿ ಬೆಂಗಳೂರು ಮತ್ತು ಶಹಪುರ ನಗರದಲ್ಲಿ ಶಾಖೆಗಳನ್ನು ಹೊಂದಿದ್ದು, ಮಧುಮೇಹ, ಥೈರಾಯ್ಡ್, ಗ್ಯಾಂಗ್ರಿನ್, ಅಲರ್ಜಿ ಅಸಿಡಿಟಿ ಪಾದದ ಗಾಯಗಳು, ಬಂಜೆತನ ಪಿಸಿಓಡಿ ಸೇರಿದಂತೆ ಇತರ ಕಾಯಿಲೆಗಳಿಗೆ ಹೋಮಿಯೋಪತಿಯಲ್ಲಿ ಒಳ್ಳೆಯ ಚಿಕಿತ್ಸೆ ದೊರಕುತ್ತದೆ ಎಂದು ತಿಳಿಸಿದರು

 

Leave a Reply

Your email address will not be published. Required fields are marked *