ಶಾಸಕರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ವನದುರ್ಗ ಗ್ರಾಮಸ್ಥರು

ಶಹಾಪುರ. ತಾಲೂಕಿನ ಭೀಮರಾಯ ಗುಡಿಯ ಪ್ರವಾಸಿ ಮಂದಿರದಲ್ಲಿ ಇಂದು ವನದುರ್ಗ ಗ್ರಾಮದ ಹಲವಾರು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ ಮತ್ತು ಕೆಪಿಸಿಸಿ ರಾಜ್ಯ ಕಾರ್ಯದರ್ಶಿಗಳಾದ ಮರಿಗೌಡ ಹುಲಕಲ್ ಪಕ್ಷದ ಧ್ವಜ ಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡುತ್ತಾ, ರಾಜ್ಯ ಮತ್ತು ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕೊಡುವ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ. ಬಡವರ ಕಾರ್ಮಿಕರ ಮತ್ತು ಸರ್ವ ಜನಾಂಗದ ಏಳಿಗೆಯನ್ನು ಬಯಸುವುದು ಕಾಂಗ್ರೆಸ್ ಕಾಂಗ್ರೆಸ್ ಪಕ್ಷವಾಗಿದ್ದು, ಶಹಾಪೂರು ಕ್ಷೇತ್ರದಲ್ಲಿ ಹಲವಾರು ಜನ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ.ಇಂದಿನ ರಾಜ್ಯ ಸರ್ಕಾರದ  ಸುಳ್ಳಿನ ಭರವಸೆಯ ಮಹಾಪೂರವನ್ನೇ ನೀಡುತ್ತಿದೆ. ರಾಜ್ಯದಲ್ಲಿ ಶಾಂತಿ ನೆಮ್ಮದಿ ಇಲ್ಲವಾಗಿದೆ. ಅಭಿವೃದ್ಧಿಯತ್ತ ಗಮನಕೊಡದೆ ಕೋಮುಗಲಭೆಗೆ ಪ್ರೋತ್ಸಾಹಿಸುತ್ತಿದೆ ಎಂದು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಸಂದರ್ಭದಲ್ಲಿ ಹನುಮಂತರಾಯ ದಳಪತಿ ಮಾ.ತಾ.ಪಂ.ಅಧ್ಯಕ್ಷರು,ಕಾಂಗ್ರೆಸ್ ವಕ್ತಾಯರಾದ ಮಲ್ಲಪ್ಪ ಉಳಂಡಗೇರಿ,ಚೆನ್ನಬಸವ ರೆಡ್ಡಿ ಚೆನ್ನೂರು, ಮಹಾದೇವಪ್ಪ ಗೌಡ ಚೆನ್ನುರು, ಲಕ್ಷ್ಮಣ ವೆಂಕಟಗಿರಿ, ಬಸ್ಸಪ್ಪ ವೆಂಕಟಗಿರಿ, ನಾಗರಾಜ ಗುತ್ತೇದಾರ್, ಮಲ್ಲಿಕಾರ್ಜುನ ಸಜ್ಜನ್, ರಂಗನಾಥ ದಳಪತಿ, ಶೇಸುರಾಮ ಸಿಂಗ್ ಸೇರಿದಂತೆ ಇತರರು ಇದ್ದರು.

 

ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡವರು

ಶೇಖಪ್ಪ ಕರಿಗುಡ್ಡ, ಕೊಂಡಯ್ಯ ದೊರಿ, ದೊಡ್ಡ ಹನುಮಂತ ಕರಿಗುಡ್ಡ, ಗಣೇಶ ನಿಶಾನಿ, ಮಹದೇವಪ್ಪ ಹುಣಸಿಗಿಡ, ಭೀಮಣ್ಣ ಕೋಳೂರು, ಮಾನಪ್ಪ ಭೋವಿ, ಮುದೆಪ್ಪ ಭೋವಿ, ಭೀಮಣ್ಣ ಬಳಬಟ್ಟಿ, ಭೀಮಣ್ಣ ಮಂಗಳೂರು, ಸಣ್ಣ ಹನುಮಂತ ಕರಿಗುಡ್ಡ, ಚಂದಪ್ಪ ಮರಾಠಿ, ಎಂಕಪ್ಪ ಸುರಪುರ, ತಿಪ್ಪಣ್ಣ ಬಟಗಿರಿ, ಸಿದ್ದಪ್ಪ ಪೀರಾಪುರ, ಚಂದ್ರಶೇಖರ್ ಗೆಜ್ಜಿ, ಭೀಮಪ್ಪ ಬಟಗಿರಿ, ಹನುಮಂತ ಬಟಗಿರಿ, ತಿರುಪತಿ ಗೆಜ್ಜಿ, ಹನುಮಂತ್ರಾಯ, ಕಾಶಿರಾಜ, ಪರಶುರಾಮ ಹುಣಸಿಗಿಡ, ಮಹದೇವಪ್ಪ ಹುಣಸಿಗಿಡ.

About The Author