ಸಗರ ಗ್ರಾಮದಲ್ಲಿ ಕರುಗಳ ಪ್ರದರ್ಶನ

ಶಹಾಪೂರ:-ತಾಲೂಕಿನ ಸಗರ ಗ್ರಾಮದಲ್ಲಿ ಹುಚ್ಚು ನಾಯಿ ರೋಗದ ತಿಳುವಳಿಕೆ  ಹಾಗೂ ಕರುಗಳ ಪ್ರದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಶಹಾಪುರ ತಾಲೂಕು  ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಷಣ್ಮುಖಪ್ಪ ಗೊಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು 2022-23ನೇ ಸಾಲಿನಲ್ಲಿ ಸರಕಾರ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತಿದೆ. 

      ಸರಕಾರದಿಂದ ಒಂದು ಲೀಟರ್ ಹಾಲಿಗೆ ಐದು ರೂಪಾಯಿಗಳ ಪ್ರೋತ್ಸಾಹ ಸಹಾಯ ಧನವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಗ್ರಾಮದ ಮತ್ತು ಸುತ್ತಲಿನ ಗ್ರಾಮಸ್ಥರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.ಡಾ. ವಿಜಯಕುಮಾರ ಪವಾರ   ಹುಚ್ಚುನಾಯಿ ಕಡಿತದ ಬಗ್ಗೆ ಸಾರ್ವಜನಿಕರು  ವಿವರಿಸಿದರು.

ಶಿಬಿರದಲ್ಲಿ 86 ಕರುಗಳು ಪ್ರದರ್ಶನಗೊಂಡಿದ್ದು  ಉತ್ತಮ ಕರುಗಳಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಉಳಿದ ಕರುಗಳಿಗೆ ಸಮಾಧಾನಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶರಣಮ್ಮ ಸಗರ, ಉಪಾಧ್ಯಕ್ಷರಾದ ನಿಂಗಮ್ಮ ಹಾಗೂ ಸದಸ್ಯರಾದ ಶಾಂತಪ್ಪ ಮರಿಯಪ್ಪ ಇನ್ನುಳಿದ ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಶಿಬಿರದಲ್ಲಿ ಡಾ. ಅಮರೇಶ ಪಶು ವೈದ್ಯಾಧಿಕಾರಿ ಸಗರ, ಡಾ. ವಿಜಯಕುಮಾರ ಪವಾರ, ಡಾ. ರಾಜು ರಾಥೋಡ, ನಿಂಗಪ್ಪ ಹಿರಿಯ ಪಶು ವೈದ್ಯಾಧಿಕಾರಿಗಳು, ನಜೀರ್ ಅಹಮದ್ ಹಿರಿಯ ಪಶು ವೈದ್ಯಾಧಿಕಾರಿಗಳು, ಮಹದೇವ ಪಾಟೀಲ್ ಶಿವಶರಣಪ್ಪ ರವಿಕುಮಾರ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.ಡಾ. ಅಮರಣ್ಣ ಕೊಬ್ಬರಿ, ನಿರೂಪಿಸಿದರು. ಡಾ. ಅಂಬರೀಶ ವಂದಿಸಿದರು

 

About The Author