ಹಳಿಸಗರ ಸಿಸಿ ರಸ್ತೆಗೆ 50 ಲಕ್ಷ : ಗೊಲ್ಗೇರ ಗ್ರಾಮ 84 ಲಕ್ಷ ಜೆಜೆಎಮ್ ಅಡಿಗಲ್ಲು : ಗ್ರಾಮೀಣ ಅಭಿವೃದ್ಧಿಯೆ ನನ್ನ ಕನಸು-ಶರಣಬಸಪ್ಪಗೌಡ ದರ್ಶನಾಪುರ

ಶಹಪುರ: ನನ್ನ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಸಿಸಿ ರಸ್ತೆ, ಕುಡಿಯುವ ನೀರು ಸೇರಿದಂತೆ ಸರಕಾರದಿಂದ ಸಿಗುವ ಮೂಲಭೂತ ಸೌಕರ್ಯ ಸಿಗುವಂತಾಗಬೇಕು. ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಕನಸು ನನಸಾಗಬೇಕು ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ತಾಲೂಕಿನ ಗೊಲ್ಗೇರಾ, ಹಳೀಪೇಠ ಮತ್ತು ತಿಮ್ಮಾಪುರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಶಹಾಪುರ ಕ್ಷೇತ್ರದ ಪ್ರತಿ ಗ್ರಾಮಗಳ ಸಂಪರ್ಕಕ್ಕೆ ರಸ್ತೆಗಳು ಅತಿ ಮುಖ್ಯ. ಪ್ರತಿ ಗ್ರಾಮದಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಕ್ಕಳಿಗೆ ಅನುಕೂಲಕರವಾದ ಸುಸಜ್ಜಿತವಾದ ಶಾಲಾ ಕಟ್ಟಡಗಳ ನಿರ್ಮಾಣದಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಶಾಲೆಯ ವಾತಾವರಣ ಸುಂದರವಾಗಿದ್ದರೆ ಶಾಲಾ ಮಕ್ಕಳು ವ್ಯಾಸಂಗ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಈ  ಸಂದರ್ಭದಲ್ಲಿ ಜಿಲ್ಲಾ  ಕಾಂಗ್ರೆಸ್ ಅಧ್ಯಕ್ಷರಾದ ಮರಿಗೌಡ ಹುಲ್ಕಲ. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುನಾಥರೆಡ್ಡಿ ಹಳಿಸಗರ. ವೆಂಕಟರೆಡ್ದಿ. ನಗರ ಸಭೆ ಅಧ್ಯಕ್ಷರಾದ ಹನುಮಂತರಾಯ ಗೌಡ, ಮರಿಯಪ್ಪ,  ಸಣ್ಣ ನಿಂಗಪ್ಪ ನಾಯ್ಕೋಡಿ. ಮಹದೇವಪ್ಪ ಸಾಲಿಮನಿ  ಗ್ರಾಮಗಳ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಸಕರು ಚಾಲನೆ ನೀಡಿದ ಕಾಮಗಾರಿಗಳು


ಗೊಲ್ಗೇರ(ಗುಡಿಸಲು) ಗ್ರಾಮದಲ್ಲಿನ ಕಾಮಗಾರಿ

* 17 ಲಕ್ಷ ರೂ. ಅನುದಾನದಲ್ಲಿ 2022-23ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಲ್ಲಿ ಎರಡು ಶಾಲಾ ಕೊಠಡಿಗಳ ಶಂಕುಸ್ಥಾಪನೆ.
* 84 ಲಕ್ಷ ರೂಪಾಯಿಯ ಜೆಜೆಎಮ್ ಕಾಮಗಾರಿ ಪ್ರಗತಿಯಲ್ಲಿ
* 25 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಶಂಕುಸ್ಥಾಪನೆ.
* 5 ಲಕ್ಷ ರೂ. ಶಾಸಕರ ಅನುದಾನದಲ್ಲಿ ಶ್ರೀ ಕೃಷ್ಣ ದೇವಾಲಯದ ನಿರ್ಮಾಣ

ತಿಮ್ಮಾಪುರ ಗ್ರಾಮದಲ್ಲಿನ ಕಾಮಗಾರಿಗಳು

* 25 ಲಕ್ಷ ರೂ. ಕೆಕೆಆರ್‌ಡಿಬಿ ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಶಂಕು ಸ್ಥಾಪನೆ
* 7 ಲಕ್ಷ ಅನುದಾನದಲ್ಲಿ ಹನುಮಾನ ಮಂದಿರ ನಿರ್ಮಾಣ
* 22 ಲಕ್ಷ ರೂ. ಅನುದಾನದಲ್ಲಿ ಜೆಜೆಎಮ್ ಕಾಮಗಾರಿ ಪ್ರಗತಿಯಲ್ಲಿ
* ನಗರದ ಹಳಿಸಗರ ವಾರ್ಡಿನಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಚೌಡಮ್ಮ ದೇವಸ್ಥಾನದಿಂದ ಶಿರವಾಳ ಕ್ರಾಸ್ ವರೆಗೆ ಸಿಸಿ ರಸ್ತೆಗೆ             ಶಂಕುಸ್ಥಾಪನೆ

About The Author