ಶಹಾಪುರ ತಾಲೂಕು ಕುರುಬರ ಸಂಘದ ಸಭೆ

ಶಹಾಪೂರ:-ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ಇವರ ನಿರ್ದೇಶನದಂತೆ ಕರ್ನಾಟಕ ಪ್ರದೇಶ ಕುರುಬರ ಸಂಘ ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷರ ಅವಧಿ ಮುಕ್ತಾಯಗೊಂಡ ಕಾರಣ ನೂತನ ಅಧ್ಯಕ್ಷರ ಆಯ್ಕೆ ಮಾಡಲು ತಿಳಿಸಿರುತ್ತಾರೆ.
ಆದರೆ ಜಿಲ್ಲಾಧ್ಯಕ್ಷರ ಆಯ್ಕೆ ಪೂರ್ವದಲ್ಲಿ ಯಾದಗಿರಿ ಜಿಲ್ಲೆಯ ಪ್ರತಿ ಜಿಲ್ಲಾ ಪಂಚಾಯಿತಿವಾರು ಒಬ್ಬ ನಿರ್ದೇಶಕರನ್ನು ಹಾಗೂ ಪ್ರತಿ ತಾಲೂಕ ಕೇಂದ್ರದಿಂದ ಎರಡು ಜನ ನಿರ್ದೇಶಕರನ್ನು ಆಯ್ಕೆ ಮಾಡಿ ಕಳುಹಿಸಲು ತಿಳಿಸಿರುತ್ತಾರೆ.
ಆದ್ದರಿಂದ  ಈ ಮೇಲಿನ ನಿರ್ದೇಶನದಂತೆ ಈ ಸಭೆಯು ಶಹಾಪುರ ತಾಲೂಕಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ದಿನಾಂಕ 30/09/2022ರಂದು ಬೆಳಿಗ್ಗೆ 10:00ಗಂಟೆಗೆ ಜರುಗಲಿದ್ದು, ಈ ಸಭೆಗೆ ಶಹಾಪುರ ತಾಲೂಕಿನ ಸಮಾಜದ ಹಿರಿಯ ಮುಖಂಡರು, ರಾಜಕೀಯ ನಾಯಕರು, ಯುವಕರು, ಶ್ರೀ ಕನಕ ನೌಕರರ ಸಂಘ ಹಾಗೂ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ಸರ್ವ ಸದಸ್ಯರು, ಪದಾಧಿಕಾರಿಗಳು, ಮಹಿಳಾ ಸಂಘದ ಸದಸ್ಯರು ಹಾಜರಿದ್ದು, ಈ ಮೂಲಕ ನೂತನ ನಿರ್ದೇಶಕರ ಆಯ್ಕೆಗೆ ಸಹಕರಿಸಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಶಾಖೆಯ ಅಧ್ಯಕ್ಷರಾದ  ಡಾ.ಭೀಮಣ್ಣ ಮೇಟಿ ಹಾಗೂ ಪ್ರಧಾನ ಕಾರ್ಯದರ್ಶಿ  ಶರಬಣ್ಣ ರಸ್ತಾಪೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *