ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸಭೆ

ದೇವದುರ್ಗ:-ತಾಲೂಕಿನ ದೇವದುರ್ಗ ರೈತ ಉತ್ಪಾದಕ ಕಂಪನಿ ಗಬ್ಬೂರು 2ನೇ ವಾರ್ಷಿಕ ಸಾಮಾನ್ಯ ಸಭೆ ದಿನಾಂಕ 27.09.22 ಗಬ್ಬೂರಿನ ಕಚೇರಿ ಹತ್ತಿರ ಶ್ರೀ ಕೃಷ್ಣ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಪನಿಿಿಯ ಅಧ್ಯಕ್ಷರಾದ ನೀಲಮ್ಮ ಗಂಗನಗೌಡ ವಹಿಸಿದ್ದರು. ಮೈರಾಡ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಗಳಾದ ಸಂಗಮೇಶ್ವರ ಕಂಬಾರ ಮತ್ತು ನಿರ್ದೇಶಕರು ಗ್ರಾಮಸ್ಥರು ರೈತರು ಶೇರುದಾರರು ರೈತ ಮಹಿಳೆಯರು ಭಾಗವಹಿಸಿದ್ದರು.
 2021-22 ರಲ್ಲಿ ಕಂಪನಿಗೆ ಲಾಭವಾಗಿಲ್ಲ. ರಸ ಗೊಬ್ಬರ, ಕ್ರಿಮಿನಾಶಕ ಬೀಜಮಾರಾಟ ಲೈಸೆನ್ಸ್ ಹಾಗೂ ಜಿಎಸ್ಟಿ ತಾಡಪತ್ರಿಗಳ ವ್ಯವಹಾರವನ್ನು ಮಾಡಲಾಗಿದೆ. ದೇವದುರ್ಗ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಕರಾದ ಶಿವಾನಂದ ಮಸೀದಪುರ 2021-22 ನೇ ಸಾಲಿನ ವರದಿ ಮಂಡಿಸಿದರು.2022-23ನೇ ಸಾಲಿನಲ್ಲಿ  1ಕೋಟಿ 34 ಲಕ್ಷ ವ್ಯವಾಹರ ಮಾಡುವ ಕುರಿತು ವರದಿಯನ್ನು ಮಂಡಿಸಿ ಸಭೆಯಲ್ಲಿ ಅನುಮೋದನೆಯನ್ನು  ಪಡೆಯಲಾಯಿತು. ಅಧ್ಯಕ್ಷರಾಧ ನೀಲಮ್ಮ ಗಂಗನಗೌಡಿ ಮಾತನಾಡಿ, ಮುಂದಿನ ದಿನದಲ್ಲಿ ನಮಗೆ ಒಟ್ಟು 1000 ಶೇರುದಾರರ ಗುರಿಯನ್ನು ಹೊಂದಿದ್ದು, ಎಲ್ಲಾ ರೈತರಿಗೆ ಉತ್ತಮವಾದ ಸೇವೆಯನ್ನು ನೀಡುವ ಮೂಲಕ ದೇವದುರ್ಗ ರೈತ ಉತ್ಪಾದಕ ಕಂಪನಿಯ ಎಲ್ಲಾ ಶೇರುದಾರರಿಗೆ ಕಡಿಮೆ ದರದಲ್ಲಿ ರೈತರಿಗೆ ಬೇಕಾದ ಪರಿಕರಗಳನ್ನು ನೀಡುವ ಗುರಿ ಹೊಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉತ್ಪಾದಕ ಕಂಪನಿಯ ಎಲ್ಲಾ ನಿರ್ದೇಶಕರು ಸದಸ್ಯರು ಆಹ್ವಾನಿತ ಅತಿಥಿಗಳಾದ ಶ್ರೀಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಲಕ್ಷ್ಮಣ ಯಾದವ,ಮಧು ಯಾದವ ಬೂದೆಪ್ಪಗೌಡ ಹಂಚಿನಾಳ ಹಾಗೂ ವಿನೋದ್ಕುಮಾರ ಶಿವರಾಂ ಅಂಜನಯ್ಯ ಪರ್ವತರೆಡ್ಡ ಇದ್ದರು. ಯಲ್ಲಪ್ಪ ಸ್ವಾಗತಿಸಿದರು. ವೀರೇಶ ನಿರೂಪಿಸಿದರು.ಆಂಜನೇಯ ವಂದಿಸಿದರು.

About The Author