ಇಂದಿನಿಂದ ಮಹಾಶೈವ ಧರ್ಮಪೀಠದಲ್ಲಿ ದಸರಾ ಮಹೋತ್ಸವ

ದೇವದುರ್ಗ:ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಶ್ರೀ ಕ್ಷೇತ್ರ ಕೈಲಾಸದಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಮಹಾಶೈವ ನವರಾತ್ರ್ಯಾನುಷ್ಠಾನಗೊಳ್ಳಲಿದೆ ಎಂದು ವಾರ್ತಾಧಿಕಾರಿ ಬಸವರಾಜ ಕರೇಗಾರ ಪ್ರಕಟಣೆಯಲ್ಲಿ ತಿಳಿಸಿದರು.

ಸೋಮವಾರ ದಿ.26 ರ ಬೆ. 7 ಗಂ.:- ಅಗ್ನಿಪ್ರಜ್ವಲನ ಕಾರ್ಯದಿಂದ ನವರಾತ್ರಿ ಉತ್ಸವ ಆರಂಭ ಪೀಠಾಧ್ಯಕ್ಷರಿಂದ ಅಖಂಡ ಮೌನ, ನಿರಹಾರ ವೃತ ಸ್ವೀಕಾರ, ರಾತ್ರಿ ವಿಶ್ವೇಶ್ವರ ದುರ್ಗಾದೇವಿಯಲ್ಲಿ ಶೈಲಪುತ್ರಿ ದೇವಿಯ ಆಹ್ವಾಹನ,ವಿಶೇಷ ಪೂಜೆ.

ದಿ.27 ರ ಮಂಗಳವಾರ:- ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಬ್ರಹ್ಮಚಾರಿ ದೇವಿಯ ಆಹ್ವಾಹನ ವಿಶೇಷ ಪೂಜೆ

ದಿ.28 ರ ಬುಧವಾರ:- ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಚಂದ್ರಘಂಟಾ ದೇವಿಯ ಆಹ್ವಾಹನ ವಿಶೇಷ ಪೂಜೆ

ದಿ.29 ರ ಗುರುವಾರ:- ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಕೂಷ್ಮಾಂಡ ದೇವಿಯ ಆಹ್ವಾಹನ ವಿಶೇಷ ಪೂಜೆ

ದಿ.30 ರ ಶುಕ್ರವಾರ:- ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಸ್ಕಂದ ಮಾತಾ ದೇವಿಯ ಆಹ್ವಾಹನ ವಿಶೇಷ ಪೂಜೆ

ಅಕ್ಟೊಬರ್ ದಿ.01 ರ ಶನಿವಾರ:- ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಕಾತ್ಯಾಯಿನಿ ದೇವಿಯ ಆಹ್ವಾಹನ ವಿಶೇಷ ಪೂಜೆ

ದಿ.02 ರ ರವಿವಾರ:- ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಬ್ರಹ್ಮಚಾರಿ ದೇವಿಯ ಆಹ್ವಾಹನ ವಿಶೇಷ ಪೂಜೆ

ದಿ.03 ರ ಸೋಮವಾರ:- ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಮಹಾಗೌರಿ ದೇವಿಯ ಆಹ್ವಾಹನ ವಿಶೇಷ ಪೂಜೆ

ದಿ.04 ರ ಮಂಗಳವಾರ:- ಮಹಾನವಮಿ ಆಯುಧಪೂಜೆ ಶ್ರೀ ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಸಿದ್ಧಿದಾತ್ರಿ ದೇವಿಯ ಆಹ್ವಾಹನೆ,ವಿಶೇಷ ಪೂಜೆ

ದಿ.05 ರ ಬುಧವಾರ:- ಮಧ್ಯಾಹ್ನ 2-00 ಗಂ. ಪೀಠಾಧ್ಯಕ್ಷರಿಂದ ಶ್ರೀ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ ಜಯ ಜಯ ಹೇ ಮಹಿಷಾಸುರ ಮರ್ದಿನಿ ಸ್ತೋತ್ರ ಪಠಣೆಯ ಮೂಲಕ ಅಖಂಡಮೌನ ವೃತ ಮಂಗಲ ಮತ್ತು ನಿರಾಹಾರವೃತ ಸಂಪನ್ನಗೊಳ್ಳುವುದು.

ಸಂಜೆ 7 ಗಂ:-.ಶ್ರೀಕ್ಷೇತ್ರದ ಕಾಳಿಕಾ ವನದಲ್ಲಿ ಶಮೀಪೂಜೆ,ಕ್ಷೇತ್ರದ ಅಧಿದೈವರುಗಳು,ಉಪದೈವಗಳಿಗೆ ಶಮೀಸಮರ್ಪಣೆ,ವಿಜಯದಶಮಿ ಆಚರಣೆ.

ಪೀಠಾಧ್ಯಕ್ಷರ ಶಕ್ತ್ಯಾಭಯ ಅನುಗ್ರಹ ವಾಣಿ

ಮಹಾಶೈವ ಧರ್ಮ ಪೀಠದ ಭಕ್ತರು ಅನುಯಾಯಿಗಳು ಮಹಾಶೈವ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಶಕ್ತಿ ಸಂಪನ್ನರಾಗಲು ಮಹಾಶೈವ ಧರ್ಮಪೀಠದ ಸೇವಾ ಸಮಿತಿಯು ಆಹ್ವಾನಿಸಿದೆ ಎಂದು ತಿಳಿಸಿದರು.

About The Author